ಅಂತರಾಷ್ಟ್ರೀಯ

ಹಚ್ಚೆಯ ಹುಚ್ಚ:ಮೈಮೇಲೆ 50 ತೂತು,110 ಹಚ್ಚೆ..

Pinterest LinkedIn Tumblr

2_0ಹಚ್ಚೆ ಹಾಕಿಸುವುದು ಈಗೀಗ ಕಾಮನ್‌ ಆಗಿದೆ. ಕೆಲವರು ಪ್ರೇಮಿಯ ಹೆಸರು ಮತ್ತೆ ಕೆಲವರು ದೇವರ ಹೆಸರು, ಚಿತ್ರ ಎಂಬಂತೆ ಕೈಯಲ್ಲಿ, ಎದೆಯಲ್ಲಿ ಬರೆಸುವುದು, ಮತ್ತೆ ಕೆಲವರು ಕುತ್ತಿಗೆಯಲ್ಲಿ ಎಂಥದೋ ಚಿತ್ರ ಬರೆಸಿಕೊಳ್ಳುವುದೆಲ್ಲ ಇದೆ. ಆದರೆ ಬ್ರಿಸ್ಟೋಲ್‌ನ ಟೆಡ್‌ ರಿಚರ್ಡ್‌ ಎಂಬ 58 ವರ್ಷದ ವ್ಯಕ್ತಿಯೇ ವಿಚಿತ್ರ.

ಈತನೋರ್ವ ಹಚ್ಚೆಯ ಹುಚ್ಚ! ಇಡೀ ಮುಖ ಗಿಳಿಯ ರೀತಿ ಕಾಣಿಸಬೇಕೆಂದು ವಿಪರೀತ ಸರ್ಕಸ್‌ ಮಾಡಿದ್ದಾನೆ. ಇದಕ್ಕಾಗಿ ಮೈಮೇಲೆಲ್ಲ ಹಚ್ಚೆ. 1976ರಿಂದ ಲಾಗಾಯ್ತು ಈವರೆಗೆ 110 ಹಚ್ಚೆ ಮೈಮೇಲೆ ಹಾಕಿಸಿಕೊಂಡಿದ್ದಾನೆ.

ಅಷ್ಟೇ ಅಲ್ಲ ಮೂಗು, ಕೆನ್ನೆ, ತುಟಿ, ಎಂದೆಲ್ಲ ಕಂಡಕಂಡಲ್ಲಿ ತೂತು ಮಾಡಿದ್ದಾನೆ. ತಲೆ ಮೇಲಿನ ತೂತುಗಳಿಗೆ ಎಂಥಧ್ದೋ ಕೊಂಬು, ಮೂಗಿಗೆ ತೂತು ಮಾಡಿ ಕಬ್ಬಿಣದ ಬೆಂಡೋಲೆ ರೀತಿ ಸಿಕ್ಕಿಸಿಕೊಂಡಿದ್ದಾಣೆ. ಅಷ್ಟಾದರೆ ಸಾಕಲ್ಲ ಎಂದರೆ ಊ ಹುಂ! ಅಸಾಮಿ ಎರಡು ಕಿವಿಯೇ ಬೇಡ ಎಂದು ಅದನ್ನೂ ಕುಯ್ಸಿಕೊಂಡಿದ್ದಾನೆ.

ಇಡೀ ಮೈಮೇಲೆ ಬಣ್ಣ ಬಣ್ಣದ ಹಚ್ಚೆ ಪ್ಲಾಸ್ಟಿಕ್‌ ಸರ್ಜರಿ ಎಲ್ಲ ಆದ ಈ ವ್ಯಕ್ತಿ ಇದೀಗ “ಟೆಡ್‌ ಪ್ಯಾರೊಟ್‌ಮ್ಯಾನ್‌’ ಎಂಬ ಹೆಸರನ್ನೂ ಇರಿಸಿಕೊಂಡಿದ್ದಾನೆ. “ನಾನೊಬ್ಬ ಅನಾಥ. ಹೆತ್ತವರು, ಒಡಹುಟ್ಟಿದವರು ಯಾರು ಗೊತ್ತಿಲ್ಲ. ಗಿಳಿಗಳೇ ನನ್ನ ಬದುಕು. ಅದು ನನ್ನ ಬದುಕನ್ನು ಪ್ರತಿಬಿಂಬಿಸುವಂತೆ ಹೀಗೆ ಗಿಳಿ ಹಚ್ಚೆಗಳನ್ನು ಹಾಕಿಸಿಕೊಂಡಿದ್ದೇನೆ’ ಎಂದು ಟೆಡ್‌ ಹೇಳಿದ್ದಾನೆ.
-ಉದಯವಾಣಿ

Write A Comment