ಕರ್ನಾಟಕ

ಪಿಸ್ತೂಲಿನಿಂದ ಹಾರಿದ ನಿಗೂಢ ಗುಂಡು : ಕಾರ್ಪೋರೇಟರ್-ವಕೀಲರ ಗಲಿಬಿಲಿ

Pinterest LinkedIn Tumblr

gun-arrestಬೆಂಗಳೂರು,ಏ.೨೮-ಬಿಬಿಎಂಪಿಯ ಪಾಲಿಕೆಯ ಸದಸ್ಯ ಕೃಷ್ಣಮೂರ್ತಿ ಅವರು ಸ್ನೇಹಿತನ ಮೇಲೆ ರಿವಲ್ವಾರ್‌ನಿಂದ ಗುಂಡು ಹಾರಿಸಿ ಗಾಯಗೊಳಿಸಿರುವ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಏ.೨೦ರಂದು ಮಧ್ಯರಾತ್ರಿ ನಡೆದ ಈ ದುರ್ಘಟನೆಯಲ್ಲಿ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡಿರುವ ಕೃಷ್ಣಮೂರ್ತಿ ಅವರ ಸ್ನೇಹಿತ ವಕೀಲ ಶಿವಕುಮಾರ್ ಬಸವೇಶ್ವರನಗರದ ಕಾಡೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿ ಕಳೆದ ಏ.೨೦ರಂದು ಸ್ನೇಹಿತರೊಬ್ಬರ ಹುಟ್ಟುಹಬ್ಬದ ಪಾರ್ಟಿ ಮುಗಿಸಿಕೊಂಡು ಕೃಷ್ಣಮೂರ್ತಿ,ವಕೀಲ ಶಿವಕುಮಾರ್ ಸೇರಿ ಆರು ಮಂದಿ ಸ್ನೇಹಿತರು ರಾತ್ರಿ ೨.೩೦ರ ವೇಳೆ ಕಾರಿನಲ್ಲಿ ವಾಪಸಾಗುತ್ತಿದ್ದಾಗ ಕ್ಲುಲಕ ಕಾರಣಕ್ಕೆ ಕೃಷ್ಣಮೂರ್ತಿ ಹಾಗೂ ಶಿವಕುಮಾರ್ ನಡುವೆ ಜಗಳ ಸಂಭವಿಸಿದೆ.
ಆಕ್ರೋಶಗೊಂಡ ಕೃಷ್ಣಮೂರ್ತಿ ಮಾರ್ಗಮಧ್ಯೆ ಹಿಂದೆ ಮಂಜುನಾಥ ನಗರದ ಪುಷ್ಪಾಂಜಲಿ ಚಿತ್ರಮಂದಿರದ ಬಳಿ ಶಿವಕುಮಾರ್‌ನನ್ನು ಕಾರಿನಿಂದ ಇಳಿಸಿ ಕಾರಿನಲ್ಲಿದ್ದ ತಮ್ಮ ಅನುಮತಿ ಪಡೆದ ರಿವಲ್ವಾರ್‌ನಿಂದ ಒಂದು ಸುತ್ತು ಗುಂಡು ಹಾರಿಸಿದ್ದಾರೆ.
ಗುಂಡು ಕಾಲಿಗೆ ತಗುಲಿ ಗಂಭೀರವಾಗಿ ಗಾಯಗೊಂಡ ಶಿವಕುಮಾರ್ ಅವರನ್ನು ಕಾಡೇ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಪೊಲೀಸರು ಕೃಷ್ಣಮೂರ್ತಿ ಅವರು ಕಾರಿನಲ್ಲಿ ವಾಪಸಾಗುವಾಗ ಬಸವೇಶ್ವರನಗರದ ಬಳಿ ಕಾರಿನಿಲ್ಲಿಸಿ ಕೆಳಗಿಳಿದು ಹೊರಹೋಗಿದ್ದಾಗ ಹಿಂದಿನ ಸೀಟಿನಲ್ಲಿದ್ದ ಶಿವಕುಮಾರ್ ಮುಂದಿನ ಸೀಟಿಗೆ ಬಂದಿದ್ದಾರೆ.
ಅಲ್ಲಿಂದ ಬಾಕ್ಸ್‌ನಲ್ಲಿ ಏನಿದೆ ಎಂದು ಏಳೆದು ನೋಡುತ್ತಿದ್ದಾಗ ಅಲ್ಲಿದ್ದ ರಿವಲ್ವಾರ್‌ನ ಟ್ರೀಗರ್‌ಗೆ ಬೆರಳು ತಗುಲಿ ಆಕಸ್ಮಿಕವಾಗಿ ಗುಂಡು ಹಾರಿ ಶಿವಕುಮಾರ್ ಅವರ ಕೈಯನ್ನು ಗುಂಡು ಸೀಳಿಕೊಂಡು ಹೋಗಿದೆ ಎಂದು ತಿಳಿಸಿದ್ದಾರೆ.ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಡಿಸಿಪಿ ಅಜಯ್ ಹಿಲೋರಿ ತಿಳಿಸಿದ್ದಾರೆ.

Write A Comment