ಕರ್ನಾಟಕ

ಬೆಂಗಳೂರು ನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳು ಬಿಜೆಪಿ ಮಡಿಲಿಗೆ

Pinterest LinkedIn Tumblr

bjpppಬೆಂಗಳೂರು, ಏ.27-ಗ್ರಾಮ ಪಂಚಾಯ್ತಿಯಿಂದ ಪುರಸಭೆ, ನಗರಸಭೆಗೆ ಉನ್ನತೀಕರಿಸಿದ ಸಂಸ್ಥೆಗಳಿಗೆ ಮೊದಲ ಬಾರಿಗೆ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದೆ. ಹೆಬ್ಬಗೋಡಿ ನಗರಸಭೆ, ಅತ್ತಿಬೆಲೆ, ಜಿಗಣಿ, ಬೊಮ್ಮಸಂದ್ರ, ಚಂದಾಪುರ ಪುರಸಭೆಗಳಲ್ಲಿ ಬಿಜೆಪಿ ಬಹುಮತ ಪಡೆದಿದೆ.

ಹೆಬ್ಬಗೋಡಿ ನಗರಸಭೆಯ 31ವಾರ್ಡ್‌ಗಳ ಪೈಕಿ ಬಿಜೆಪಿ ಅಭ್ಯರ್ಥಿಗಳು ಹದಿನಾರು ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳು 14ರಲ್ಲಿ ಗೆದ್ದಿದ್ದರೆ , ಒಂದು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಚುನಾಯಿತರಾಗಿದ್ದಾರೆ. ಕಳೆದ ಭಾನುವಾರ ಚುನಾವಣೆ ನಡೆದಿತ್ತು.

ಇಂದು ಆನೇಕಲ್‌ನಲ್ಲಿ ನಡೆದ ಮತ ಎಣಿಕೆಯಲ್ಲಿ ಈ ಫಲಿತಾಂಶ ವ್ಯಕ್ತವಾಗಿದ್ದು, 4 ಪುರಸಭೆ ಹಾಗೂ 1 ನಗರಸಭೆ ಅಧಿಕಾರ ಬಿಜೆಪಿ ಮಡಿಲಿಗೆ ಸೇರಿದಂತಾಗಿದೆ.

Write A Comment