ಕನ್ನಡ ವಾರ್ತೆಗಳು

ಜೈಲು ಸಿಬ್ಬಂದಿಗಳಿಗೆ “ಸಾಮಾರ್ಥ್ಯ ವರ್ಧನೆ ತರಬೇತಿ ಕಾರ್ಯಗಾರ”

Pinterest LinkedIn Tumblr

Subjail_prgrm_pic_1

ಮಂಗಳೂರು,ಎಪ್ರಿಲ್.27 : ಕಾರಗೃಹ ಇಲಾಖೆ ಹಾಗೂ ವೃಕ್ಷಂ ಟ್ಯಾಲೆಂಟ್ ಗ್ರೂಪ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕಾರಗೃಹ ಸಿಬ್ಬಂದಿಗಳಿಗಾಗಿ ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಆಯೋಜಿಸಲಾದ “ಸಾಮಾರ್ಥ್ಯ ವರ್ಧನೆ ತರಬೇತಿ ಕಾರ್ಯಗಾರ” ನಗರದ ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಇಂದು ಉದ್ಘಾಟನೆಗೊಂಡಿತ್ತು.

Subjail_prgrm_pic_2 Subjail_prgrm_pic_3 Subjail_prgrm_pic_4

ಕೇಂದ್ರ ಕಾರಾಗೃಹದ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಸುವ ಸಲುವಾಗಿ ಆಯೋಜಿಸಲಾದ ಈ ಕಾರ್ಯಾಗಾರವನ್ನು ಜಿಲ್ಲಾ ಸೆಷನ್ಸ್ ಕೋರ್ಟ್ ನ್ಯಾಯಾಧೀಶೆ ಉಮಾ ಎಂ.ಜಿ. ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಇಂತಹ ಕಾರ್ಯಕ್ರಮವೊಂದನ್ನು ಆಯೋಜಿಸಿಲಾಗಿದ್ದು, ವೃಕ್ಷಂ ಸಂಸ್ಥೆಯವರ ಈ ಮಾದರಿಯ ಕಾರ್ಯಾಗಾರ ಹೆಚ್ಚು ಪರಿಣಾಮ ಬೀರುವುದಾಗಿ ಹೇಳಿದರು. ಜೈಲಿನಂತಹ ಅಭದ್ರತೆ ವಾತಾವರಣದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಇಂತಹ ಕಾರ್ಯಾಗಾರಗಳಿಂದ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಉಮಾ ಎಂ.ಜಿ. ಹೇಳಿದರು.

Subjail_prgrm_pic_5 Subjail_prgrm_pic_6 Subjail_prgrm_pic_7 Subjail_prgrm_pic_8 Subjail_prgrm_pic_9 Subjail_prgrm_pic_10

ಪ್ರಸಕ್ತ ಸನ್ನಿವೇಶದಲ್ಲಿ 50 ಶೇ.ಸರಕಾರಿ ನೌಕರರಿಗೆ ತಾವು ಕಾರ್ಯ ನಿರ್ವಹಿಸುವ ಕ್ಷೇತ್ರದಲ್ಲಿ ಅಭದ್ರತೆ ಕಾಡುತ್ತಿದ್ದು, ಇದರಿಂದ ದಕ್ಷತೆ ಕೊರತೆ ಕಂಡು ಬರುತ್ತದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಕಾರ್ಯಕ್ರಮಗಳು ಪರಿಣಾಮ ಬೀರುತ್ತದೆ ಎಂದು ಉಮಾ ಎಂ.ಜಿ. ಹೇಳಿದರು.

ಕಾರ್ಯಕ್ರಮದಲ್ಲಿ ಜೈಲ್ ಅಧೀಕ್ಷಕರಾದ ಕೃಷ್ಙ ಮೂರ್ತಿ, ದ.ಕ.ಜಿಲ್ಲಾ ಎಸ್.ಪಿ.ಡಾ. ಶರಣಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment