ರಾಷ್ಟ್ರೀಯ

ತೃಣಮೂಲ ಕಾಂಗ್ರೆಸ್ ಪೋಸ್ಟರ್ ನ್ನು ಹರಿದಿದ್ದಕ್ಕೆ 10 ವರ್ಷದ ಬಾಲಕನಿಗೆ ಥಳಿತ!

Pinterest LinkedIn Tumblr

WB-2ಕೋಲ್ಕತಾ: ತೃಣಮೂಲ ಕಾಂಗ್ರೆಸ್ ನ ಪೋಸ್ಟರ್ ನ್ನು ಹರಿದಿದ್ದಕ್ಕೆ 10 ವರ್ಷದ ಬಾಲಕನನ್ನು ಥಳಿಸಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಟಿಎಂಸಿ ಅಭ್ಯರ್ಥಿಯೊಬ್ಬನ ಪೋಸ್ಟರ್ ನ್ನು ಹರಿದು ಹಾಕಿದ್ದಕ್ಕಾಗಿ ಬಾಲಕನಿಗೆ ಥಳಿಸಲಾಗಿದ್ದು, ಈ ಪ್ರಕರಣದಲ್ಲಿ ಆರು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆದರೆ ಈ ವರೆಗೂ ಯಾರನ್ನೂ ಬಂಧನಕ್ಕೊಳಪಡಿಸಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಳಿಪಟ ಮಾಡುವುದಕ್ಕಾಗಿ ಪೋಸ್ಟರ್ ಗಳನ್ನು ಹಾರಿದೆ. ಆದರೆ ಇದನ್ನು ಗಮನಿಸಿದ ಕೆಲವರು, ಹೊಡೆದು ಕಾಲು ಕಟ್ಟಿಹಾಕಿ ನನ್ನನ್ನು ಎಸೆದಿದ್ದಾರೆ ಎಂದು ಹಲ್ಲೆಗೊಳಗಾದ ಬಾಲಕ ಹೇಳಿದ್ದಾನೆ. ಬಾಲಕನ ಕುಟುಂಬ ಸದಸ್ಯರು ತೃಣಮೂಲ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ಟಿಎಂಸಿ ತನ್ನ ಕಾರ್ಯಕರ್ತರ ವಿರುದ್ಧ ಕೇಳಿಬಂದಿರುವ ಆರೋಪವನ್ನು ಅಲ್ಲಗಳೆದಿದೆ.

Write A Comment