ಕರ್ನಾಟಕ

ರಾಜ್ಯಕ್ಕೆ ರೈಲಿನಲ್ಲಿ ನೀರು

Pinterest LinkedIn Tumblr

Tanker-trainಬೆಂಗಳೂರು, ಏ.೨೭- ತೀವ್ರ ಬರಗಾಲ ಹಿನ್ನೆಲೆಯಲ್ಲಿ ಬರ ಪ್ರದೇಶಗಳಿಗೆ ರೈಲಿನಲ್ಲಿ ನೀರು ಪೊರೈಸುವ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಪ್ರಸ್ತಾವನೆಯೊಂದನ್ನು ಇಟ್ಟಿದ್ದು. ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆದಿದೆ.

ಮಹಾರಾಷ್ಟ್ರ ಮಾದರಿ ಆಧಾರವಾಗಿಟ್ಟುಕೊಂಡು ಕರ್ನಾಟಕದ ವಿವಿಧೆಡೆ ರೈಲಿನ ಮೂಲಕ ನೀರು ಪೊರೈಕೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹಂತದಲ್ಲಿ ಚರ್ಚೆಯಾಗಿದೆ. ”ಕಾದು ನೋಡೋಣೋ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆಂದು ಗೊತ್ತಾಗಿದೆ

ಕಂದಾಯ, ಗ್ರಾಮೀಣಾಭಿವೃದ್ಧಿ ಇಲಾಖೆ ಮಟ್ಟದಲ್ಲಿ ಇದರ ಸಾಧಕ, ಬಾಧಕಗಳ ಬಗ್ಗೆ ಚಿಂತನೆ ನಡೆದಿದ್ದು, ಮಹಾರಾಷ್ಟ್ರ ಸರಕಾರ ಮಾದರಿ ರೈಲಿನಲ್ಲಿ ಬರ ಪ್ರದೇಶಗಳಿಗೆ ರೈಲಿನಲ್ಲಿ ನೀರು ಪೊರೈಸುವ ಬಗ್ಗೆ ನಿನ್ನೆ ಹಾವೇರಿ ಹಾಗೂ ಧಾರವಾಡದಲ್ಲಿ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಬಳಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕುಡಿಯುವ ನೀರಿಗೆ ರಾಜ್ಯದಾದ್ಯಂತ ಹಾಹಾಕಾರ ಉಂಟಾಗಿದ್ದು, ಮಳೆ ಬರದಿದ್ದರೇ ಮತ್ತಷ್ಟು ಭೀಕರ ಪರಿಸ್ಥಿತಿ ಎದುರಿಸಬೇಕಾಗಿದೆ ಎಂದು ವಿಚಾರ ಪ್ರಸ್ತಾಪಿಸಿದ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾದು ನೋಡೋಣ ಸದ್ಯಕ್ಕೆ ಸುಮ್ಮನಿರಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಬರದಿಂದ ತತ್ತರಿಸಿ ಹೋದ ಜೆಲ್ಲೆಗಳಿಗೆ ರೈಲಿನಲ್ಲಿ ನೀರು ಸರಬರಾಜು ಮಾಡುವ ಕಾರ್ಯ ಸಾಧ್ಯತೆ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಚರ್ಚೆ ನಡೆಸಿದ್ದಾರೆ. ಅಧಿಕಾರಿಗಳ ಈ ಪ್ರಸ್ತಾವನೆಗೆ ಸರಕಾರ ಕೂಡ ಚಿಂತನೆ ನಡೆಸಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಮೀರಜ್ ರೈಲು ನಿಲ್ದಾಣದಿಂದ ಲಾತೂರ್‌ಗೆ ೧೦ ವ್ಯಾಗನ್ ನೀರು ತುಂಬಿದ ೫ ಲಕ್ಷ ಲೀಟರ್ ನೀರನ್ನು ರೈಲಿನ ಮೂಲಕ ಸಾಗಿಸಿ ಜನರ ದಾಹ ತೀರಿಸುವ ಪ್ರಯತ್ನ ಯಶಸ್ವಿಯಾಗಿತ್ತು.

Write A Comment