ಕರ್ನಾಟಕ

ವೈದ್ಯರಿಗೆ ಸರ್ಜರಿ

Pinterest LinkedIn Tumblr

Doctor-medical-healthಬೆಂಗಳೂರು, ಏ. ೨೬- ನಗರದಲ್ಲಿ ನೆಲೆಯೂರಿರುವ ವೈದ್ಯರು, ತಜ್ಞವೈದ್ಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಬೇರೆಡೆ ವರ್ಗ ಮಾಡಲು ಸರ್ಕಾರ ಮುಂದಾಗಿದೆ.
ಈ ಎಲ್ಲ ವರ್ಗಾವಣೆಗಳನ್ನು ಕೌನ್ಸಿಲಿಂಗ್ ಮೂಲಕವೇ ನಡೆಯಲಿದೆ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 13 ಸಾವಿರಕ್ಕೂ ಹೆಚ್ಚು ಮಂದಿ 10 ವರ್ಷಕ್ಕೂ ಹೆಚ್ಚು ಕಾಲ ನೆಲೆಯೂರಿದ್ದಾರೆ. ಇವರೆಲ್ಲರನ್ನು ಬೆಂಗಳೂರಿನಿಂದ ಬೇರೆಡೆಗೆ ವರ್ಗಮಾಡಲಾಗುವುದು ಎಂದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಇಲಾಖೆಯ 1200 ಮಂದಿ ಸಿಬ್ಬಂದಿಗೆ ಬಡ್ತಿ ಭಾಗ್ಯ ಕರುಣಿಸಲು ಸರ್ಕಾರ ನಿರ್ಧರಿಸಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತ ಖಾಸಗಿಯಾಗಿ ದುಡಿಯುತ್ತಿದ್ದ ವೈದ್ಯರಿಗೆ ಸರ್ಕಾರದ ಈ ನಿರ್ಧಾರ ನುಂಗಲಾರದ ತುತ್ತಾಗಿದೆ.
ಮಾವಿನ ಹಣ್ಣಿಗೆ ರಾಸಾಯನಿಕ ಸೇರಿಸಿ ಹಣ್ಣು ಮಾಡುವ ಕ್ರಮವನ್ನು ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

Write A Comment