ಅಂತರಾಷ್ಟ್ರೀಯ

ವಿಶ್ವಮಟ್ಟಕ್ಕೇರಿದ ಕರ್ನಾಟಕ; ಅಮೆರಿಕ ರಸ್ತೆಗೆ ವೈದ್ಯ ಸಂಪತ್ ಶಿವಂಗಿ ಲಾನೆ ಹೆಸರು ನಾಮಕರಣ

Pinterest LinkedIn Tumblr

21

ವಾಷಿಂಗ್ಟನ್: ಕನ್ನಡಿಗರ ಮತ್ತೆ ವಿಶ್ವಮಟ್ಟದಲ್ಲಿ ಹೆಸರು ಮಾಡಿದ್ದು, ಅತ್ಯಂತ ಅಪರೂಪದ ಪ್ರಕರಣವೊಂದರಲ್ಲಿ ಅಮೆರಿಕದ ಮಿಸಿಸಿಪ್ಪಿ ರಾಜ್ಯ ರಸ್ತೆಯೊಂದಕ್ಕೆ ಕನ್ನಡಿಗ ಡಾ.ಸಂಪತ್ ಶಿವಂಗಿ ಅವರ ಹೆಸರನ್ನಿಡಲಾಗಿದೆ.

ಡಾ.ಸಂಪತ್ ಶಿವಂಗಿ ಲಾನೆ ಅವರು ಇಲ್ಲಿನ ಸಮುದಾಯಕ್ಕೆ ಸಲ್ಲಿಸಿದ ಅಪಾರ ಸೇವೆಯನ್ನು ಪರಿಗಣಿಸಿದ ಮಿಸಿಸಿಪ್ಪಿ ಸರ್ಕಾರ ಸೋಮವಾರ ರಸ್ತೆಯೊಂದಕ್ಕೆ ಶಿವಂಗಿ ಅವರ ಹೆಸರನ್ನು ಮರು ನಾಮಕರಣ ಮಾಡಿದೆ. ಮೂಲತಃ ಕರ್ನಾಕದವರಾದ ಡಾ.ಸಂಪತ್ ಶಿವಂಗಿ ಅವರು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದು, ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ಅವರು ನೀಡಿದ ಅಪಾರ ಸೇವೆಯನ್ನು ಪರಿಗಣಿಸಿ ರಸ್ತೆಯೊಂದಕ್ಕೆ ಡಾ.ಸಂಪತ್ ಶಿವಂಗಿ ಲೇನ್ ಎಂಬ ಹೆಸರನ್ನಿಟ್ಟು ಅವರನ್ನು ಗೌರವಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ಸಂಪತ್ ಶಿವಂಗಿ ಅವರು, ಮಾನಸಿಕ ಅಸ್ವಸ್ಥರ ಕಲ್ಯಾಣಕ್ಕಾಗಿ ನಾನು ನೀಡುತ್ತಿರುವ ಸೇವೆಯನ್ನು ಗುರುತಿಸಿ ನನ್ನ ಹೆಸರನ್ನು ರಸ್ತೆಗಿಡುವ ಮೂಲಕ ನನ್ನ ಹೆಸರನ್ನು ಶಾಶ್ವತಗೊಳಿಸಿರುವ ಮಿಸಿಸಿಪ್ಪಿ ರಾಜ್ಯಪಾಲ ಫಿಲ್ ಬ್ರ್ಯಾಂಟ್ ಅವರಿಗೆ ನಿಜಕ್ಕೂ ನಾನು ಧನ್ಯವಾದವನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಡಾ.ಸಂಪತ್ ಶಿವಂಗಿ ಅವರ ಸ್ಥೂಲ ಪರಿಚಯ
ಡಾ.ಸಂಪತ್ ಶಿವಂಗಿ ಅವರು ಮಣಿಪಾಲ ಕೆಎಂಸಿಯ 1962ರ ತಂಡದ ವಿದ್ಯಾರ್ಥಿಯಾಗಿದ್ದು, ಇಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಬಳಿಕ ಅವರ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಮಿಸಿಸಿಪ್ಪಿ ವೈದ್ಯಕೀಯ ವೃತ್ತಿ ಆರಂಭಿಸಿದ ಶಿವಂಗಿ ಅವರು, ಮಿಸಿಸಿಪ್ಪಿಯ ಮಾನಸಿಕ ಆರೋಗ್ಯ ಇಲಾಖೆ ( Mississippi Department of Mental Health)ಯ ಅಧ್ಯಕ್ಷರಾಗಿ 2014ರ ಜೂನ್ ನಲ್ಲಿ ಆಯ್ಕೆಯಾದರು. ಆ ಮೂಲಕ ಈ ಇಲಾಖೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ಏಷ್ಯನ್ ಅಮೆರಿಕನ್ ವ್ಯಕ್ತಿ ಎಂಬ ಖ್ಯಾತಿಗೂ ಶಿವಂಗಿ ಪಾತ್ರರಾದರು. ಇಲಾಖೆಯಲ್ಲಿ ಅಪಾರ ಸೇವೆಸಲ್ಲಿಸಿದ ಶಿವಂಗಿ ಅವರು ತಮ್ಮ ಸೇವೆಯಿಂದಲೇ ಎರಡನೇ ಬಾರಿಗೂ ಅಧ್ಯಕ್ಷರಾಗಿ ಆಯ್ಕೆಯಾದರು.

2005-2008ರ ಅವಧಿಯಲ್ಲಿ ಅಮೆರಿಕದ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಯವರ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಮಿಸಿಸಿಪ್ಪಿ ಭಾರತ ಮೂಲದ ಅಮೆರಿಕನ್ ಅಸೋಸಿಯೇಷನ್ ಆಪ್ ಫಿಜಿಶಿಯನ್ಸ್ ಸಂಸ್ಥೆ ಸಂಸ್ಫಾಪಕ ಅಧ್ಯಕ್ಷರಾಗಿ, ಇಂಡಿಯನ್ ಅಸೋಸಿಯೇಷನ್ ಆಫ್ ಮಿಸಿಸಿಪ್ಪಿಯ ಅಧ್ಯಕ್ಷರಾಗಿಯೂ ಶಿವಂಗಿ ಅವರು ಸೇವೆ ಸಲ್ಲಿಸಿದ್ದಾರೆ.

Write A Comment