ರಾಷ್ಟ್ರೀಯ

ಸುಷ್ಮಾ ಸ್ವರಾಜ್ ಆಸ್ಪತ್ರೆಗೆ ದಾಖಲು

Pinterest LinkedIn Tumblr

Sushma Swaraj

ನವದೆಹಲಿ: ಅನಾರೋಗ್ಯದ ಕಾರಣದಿಂದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಎಐಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಐಐಎಂಎಸ್ ಆಸ್ಪತ್ರೆ ಮೂಲಗಳ ಪ್ರಕಾರ ಸೋಮವಾರ ಸಂಜೆ 5 ಗಂಟೆಗೆ ಸುಷ್ಮಾ ಅವರನ್ನು ಪಲ್ಮನರಿ ಮೆಡಿಸಿನ್ ಡಿಪಾರ್ಟ್‌ಮೆಂಟ್‌ನ ಹಳೇ ಖಾಸಗಿ ವಾರ್ಡ್‌ನಲ್ಲಿ ದಾಖಲು ಮಾಡಲಾಗಿದೆ. ರಾತ್ರಿ 10 ಗಂಟೆಯ ವೇಳೆಗೆ 64ರ ಹರೆಯದ ಸುಷ್ಮಾ ಅವರನ್ನು ಕಾರ್ಡಿಯೋ ನ್ಯೂರೋ ಸೆಂಟರ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಸುಷ್ಮಾ ಅವರ ಆರೋಗ್ಯ ಸ್ಥಿತಿ ಸುಧಾರಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ. ಏತನ್ಮಧ್ಯೆ, ಸುಷ್ಮಾ ಅವರಿಗೆ ಯಾವ ಕಾಯಿಲೆ ಬಂದಿತ್ತು ಎಂಬುದರ ಬಗ್ಗೆ ಮಾಹಿತಿ ಲಭಿಸಿಲ್ಲ.

Write A Comment