ಕರ್ನಾಟಕ

ಸುದ್ದಿಯಲ್ಲಿರುವ ಕಿಚ್ಚ ಸುದೀಪ್ ನಟನೆಯ ‘ಹೆಬ್ಬುಲಿ’ಯಲ್ಲಿ ರವಿಕಿಶನ್ ವಿಲನ್ ಪಾತ್ರ ಏನು ಗೊತ್ತಾ..?

Pinterest LinkedIn Tumblr

hebbuli

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವ ಹೆಬ್ಬುಲಿ ಚಿತ್ರ ಅನೌನ್ಸ್ ಆದಾಗಿಂದ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡ್ತಾನೆ ಇದೆ.

ಸುದೀಪ್ ಗೆ ನಾಯಕಿಯಾಗಿ ಚಿತ್ರದಲ್ಲಿ ಅಮಲಾ ಪೌಲ್ ನಟಿಸುತ್ತಿದ್ದಾರೆ. ಹೆಬ್ಬುಲಿಯ ಇತ್ತೀಚಿನ ಸುದ್ದಿ ಏನೆಂದರೇ, ಪ್ರಸಿದ್ಧ ನಟ ರವಿ ಕಿಶನ್ ಚಿತ್ರದಲ್ಲಿ ಅಭಿನಯಿಸುತ್ತಿರುವುದು.

ಸುದೀಪ್ ವಿರುದ್ಧ ಕಳನಾಯಕನಾಗಿ ರವಿಶಂಕರ್ ನಟಿಸುತ್ತಿರುವುದನ್ನು ನಿರ್ದೇಶಕ ಎಸ್. ಕೃಷ್ಣ ಖಚಿತ ಪಡಿಸಿದ್ದಾರೆ, ಹಿಂದಿ ಮತ್ತು ಬೋಜ್ ಪುರಿ ಸಿನಿಮಾಗಳಲ್ಲಿ ಹೆಸರುವಾಸಿಯಾಗಿರುವ ರವಿಶಂಕರ್ ತೆಲುಗಿನ ರೇಸ್ ಗುರ್ರಂ, ಕಿಕ್ -2 ನಲ್ಲಿ ನಟಿಸಿದ್ದಾರೆ.

ಇನ್ನು ಹೆಬ್ಬುಲಿ ಸಿನಿಮಾದಲ್ಲಿ ರವಿ ಶಂಕರ್, ಕಬೀರ್ ದುಹಾನ್ ಸಿಂಗ್, ಮತ್ತು ಚಿಕ್ಕಣ್ಣ ಕೂಡ ನಟಿಸಿದ್ದಾರೆ. ಎಸ್ ವಿ ಪ್ರೊಡಕ್ಷನ್ ಮತ್ತು ಉಮಾಪತಿ ಫಿಲ್ಮ್ ಸಹಯೋಗದಲ್ಲಿ ತಯಾರಾಗುತ್ತಿರುವ ಹೆಬ್ಬುಲಿ ಚಿತ್ರ ಮೇ-1ರಂದು ಸೆಟ್ಟೇರಲಿದೆ.

Write A Comment