ರಾಷ್ಟ್ರೀಯ

ವಿಮಾನ ಹಾರಾಟದ ವೇಳೆ ಕಾಕ್‌ಪಿಟ್ ನಲ್ಲಿ ಗಗನಸಖಿಯನ್ನು ಬಲವಂತವಾಗಿ ಕೂರಿಸಿದ ಪೈಲಟ್ ವಜಾ

Pinterest LinkedIn Tumblr

SpiceJet

ನವದೆಹಲಿ: ಸ್ಪೈಸ್ ಜೆಟ್‌ನ ಕಂಪನಿಯ ಬೋಯಿಂಗ್ 737 ವಿಮಾನದಲ್ಲಿ ವಿಮಾನ ಹಾರಾಟದ ವೇಳೆ ಪ್ರಧಾನ ಗಗನಸಖಿಯನ್ನು ಕಾಕ್‌ಪಿಟ್‌ನಲ್ಲಿ ಬಲವಂತವಾಗಿ ಕುಳಿತುಕೊಳ್ಳುವಂತೆ ಮಾಡಿದ ಪೈಲಟ್‌ನ್ನು ವಜಾ ಮಾಡಲಾಗಿದೆ.

ಫೆಬ್ರವರಿ 28ರಂದು ಕೊಲ್ಕತ್ತಾ -ಬ್ಯಾಂಕಾಕ್ ವಿಮಾನದಲ್ಲಿ ಈ ಘಟನೆ ನಡೆದಿದೆ. ಈ ಪೈಲಟ್ ವಿಮಾನ ಮರಳಿ ಬರುವಾಗಲೂ ಪೈಲಟ್ ಇದೇ ರೀತಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ತನ್ನ ಜತೆಗಿದ್ದ ಪೈಲಟ್‌ನ್ನು ಹೊರಗೆ ಕಳಿಸಿದ ಪೈಲಟ್, ಗಗನಸಖಿಯನ್ನು ಒಳಗೆ ಕರೆದು ಕಾಕ್‌ಪಿಟ್ ಲಾಕ್ ಮಾಡಿದ್ದ. ಅಷ್ಟೇ ಅಲ್ಲದೆ ಗಗನ ಸಖಿಯ ಜತೆ ಅಸಭ್ಯ ಭಾಷೆಯಲ್ಲಿ ಮಾತನಾಡಿದ್ದ ಎಂದು ದೂರು ನೀಡಲಾಗಿದೆ.

ಈ ಬಗ್ಗೆ ವಿಮಾನ ಸಂಸ್ಥೆ ತನಿಖೆ ಕೈಗೊಂಡು ಪೈಲಟ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಮನವಿ ಮಾಡಿದ್ದರು.

ಸುದ್ದಿ ಮಾಧ್ಯಮವೊಂದರ ಪ್ರಕಾರ ಪೈಲಟ್ ನ ಲೈಸನ್ಸ್ ರದ್ದು ಪಡಿಸಲಾಗಿದೆ. ಅದೇ ವೇಳೆ ಈತನ ವಿರುದ್ದ ಆರೋಪ ಸಾಬೀತಾದರೆ ಭವಿಷ್ಯದಲ್ಲಿ ಈತನಿಗೆ ವಿಮಾನ ಹಾರಾಟ ಮಾಡುವ ಅವಕಾಶವನ್ನೇ ರದ್ದು ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಮುಖ್ಯಸ್ಥ ಎಂ ಸತ್ಯವತಿ ಹೇಳಿದ್ದಾರೆ.

Write A Comment