ರಾಷ್ಟ್ರೀಯ

ಯುವತಿಯನ್ನು ಕಚೇರಿಯಿಂದ ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ ಕಾಮುಕ ! ಸಿಸಿಟಿವಿಯಲ್ಲಿ ದೃಶ್ಯ ಸೆರೆ

Pinterest LinkedIn Tumblr

muktsar-kidnapping

ಚಂಡೀಗಢ: ವ್ಯಕ್ತಿಯೊಬ್ಬ ಮಾರ್ಚ್ 25ರಂದು 24 ವರ್ಷದ ಮಹಿಳೆಯೊಬ್ಬರನ್ನ ಆಕೆ ಕೆಲಸ ಮಡುತ್ತಿದ್ದ ಕಚೇರಿಯಿಂದ ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ್ದ ಘಟನೆ ಪಂಜಾಬ್‍ನ ಮುಕ್ಸ್ತಾರ್‍ನಲ್ಲಿ ನಡೆದಿತ್ತು. ಇದೀಗ ಆ ವ್ಯಕ್ತಿ ಮಹಿಳೆಯನ್ನ ಎಳೆದೊಯ್ಯುತ್ತಿರುವುದರ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ.

ಮಹಿಳೆ ಸಹಾಯಕ್ಕಾಗಿ ಕಿರುಚಾಡಿದ್ರೂ ಯಾರೊಬ್ಬರೂ ಆಕೆಯ ಸಹಾಯಕ್ಕೆ ಬರಲಿಲ್ಲ. ಕೆಲ ಸಮಯದ ನಂತರ ಮಹಿಳೆಯ ಸಹೋದ್ಯೋಗಿಗಳು ಹೊರ ಬರುವುದನ್ನು ಗಮನಿಸಬಹುದು. ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿದ್ದು ಒಂದು ತಿಂಗಳಾದರೂ ಆತನನ್ನು ಪೊಲೀಸರು ಬಂಧಿಸಿಲ್ಲ. ಅಲ್ಲದೆ ಘಟನೆ ನಡೆದು 5 ದಿನಗಳ ನಂತರವಷ್ಟೆ ಪೊಲೀಸರು ಈ ಪ್ರಕರಣದ ಬಗ್ಗೆ ಎಫ್‍ಐಆರ್ ದಾಖಲಿಸಿದ್ದಾರೆ ಎನ್ನಲಾಗಿದೆ.

ಅತ್ಯಾಚಾರವೆಸಗಿದ ಆರೋಪಿ ಅದೇ ಗ್ರಾಮದವನಾಗಿದ್ದು ಆತನಿಗೆ ಮಹಿಳೆಯ ಪರಿಚಯವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಮಹಿಳೆ ಮತ್ತು ಆಕೆಯ ತಂದೆ ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗಕ್ಕೆ ಭೇಟಿ ನೀಡಿದ್ದು, ತನಿಖೆ ತಡವಾಗಿರುವುದು ಯಾಕೆ ಎಂದು ವಿವರಿಸಬೇಕೆಂದು ಮುಕ್ಸ್ತಾರ್‍ನ ಉನ್ನತ ಪೊಲೀಸ್ ಅಧಿಕಾರಿಗೆ ಆಯೋಗದಿಂದ ಸಮನ್ಸ್ ಜಾರಿ ಮಾಡಲಾಗಿದೆ.

Write A Comment