ಕರ್ನಾಟಕ

ಮೈಸೂರು : ಮಗಳ ಮೇಲೆಯೇ ಅತ್ಯಾಚಾರವೆಸಗಿದ ಕಾಮುಕ ತಂದೆಯ ಬಂಧನ

Pinterest LinkedIn Tumblr

rapeಮೈಸೂರು,ಏ.18-ಮಗಳ ಮೇಲೆ ಅತ್ಯಾಚಾರ ವೆಸಗುತ್ತಿದ್ದ ಕಾಮುಕ ತಂದೆಯನ್ನು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉದಯಗಿರಿ ನಿವಾಸಿ ಸಾಹೀದ್ ಭಾಷ(33) ಅತ್ಯಾಚಾರ ವೆಸಗಿದ ತಂದೆ. ಕಟ್ಟಡ ನಿರ್ಮಾಣದ ಗುತ್ತಿಗೆದಾರರನಾಗಿ ಕೆಲಸ ನಿರ್ವಹಿಸುತ್ತಿದ್ದ ಈತ ತನ್ನ ಏಳು ವರ್ಷದ ಮಗಳ ಮೇಲೆ ಕೆಲ ತಿಂಗಳಿನಿಂದಲೂ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ತಾಯಿ ಕೆ.ಆರ್.ಆಸ್ಪತ್ರೆ ಕರೆದೊಯದ್ದಾಗ, ನಿಮ್ಮ ಮಗಳ ಮೇಲೆ ಅತ್ಯಾಚಾರ ನಡೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಕೂಡಲೇ ಮಗಳನ್ನು ವಿಚಾರಿಸಿದಾಗ ಬಾಲಕಿ ನಡೆದ ಘಟನೆ ಬಗ್ಗೆ ವಿವರಿಸಿದ್ದಾಳೆ. ಉದಯಗಿರಿ ಠಾಣೆ ಪೊಲೀಸರು ಕಾಮುಕ ತಂದೆಯನ್ನು ಬಂಧಿಸಿದ್ದಾರೆ.

Write A Comment