ಕರ್ನಾಟಕ

ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿ ಹೊರಬಂದು ನ್ಯಾಯ ಕೊಡಿಸಿ ಎಂದು ಟವರ್ ಏರಿದ ಭೂಪ !

Pinterest LinkedIn Tumblr

Hubli suicide

ಹಾವೇರಿ: ನನಗೆ ಅನ್ಯಾಯವಾಗಿದೆ. ನ್ಯಾಯಕೊಡಿಸಿ ಎಂದು ಬೇಡಿಕೆ ಇಟ್ಟಿರುವ ಶಿಗ್ಲಿ ಬಸ್ಯಾ ಎಂಬಾತ ಮೊಬೈಲ್ ಟವರ್ ಏರಿ ಕುಳಿತು ಪ್ರತಿಭಟನೆಗಿಳಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನ ಕಮದೋಡ ಗ್ರಾಮದಲ್ಲಿ ನಡೆದಿದೆ.

ಟವರ್ ಕೆಳಭಾಗದಲ್ಲಿ ಅಂಬೇಡ್ಕರ್ ಭಾವಚಿತ್ರವಿಟ್ಟು, ಪೂಜೆ ಸಲ್ಲಿಸಿದ ಶಿಗ್ಲಿ, ರಾಷ್ಟ್ರಧ್ವಜವನ್ನು ಹಿಡಿದು ಮೊಬೈಲ್ ಟವರ್ ಏರಿದ್ದಾನೆ. ಕಳ್ಳತನ ಪ್ರಕರಣಗಳಲ್ಲಿ ಜೈಲು ಸೇರಿ ಹೊರ ಬಂದಿರೋ ಶಿಗ್ಲಿ, ನನಗೆ ಅನ್ಯಾಯವಾಗಿದೆ, ನ್ಯಾಯಕೊಡಿಸಿ ಎಂದು ಬೇಡಿಕೆ ಇಟ್ಟಿದ್ದಾನೆ. ಗ್ರಾಮಸ್ಥರು, ಪೊಲೀಸರು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಒಲ್ಲೆ ಎನ್ನುತ್ತಿದ್ದಾನೆ ಶಿಗ್ಲಿ ಬಸ್ಯಾ. ಈ ಸಂಬಂಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment