ಕರ್ನಾಟಕ

ಡಿಸ್ಕವರಿ ಚಾನೆಲ್‍ನಲ್ಲಿ ಪ್ರಸಾರವಾಗಲಿವೆ ಮೌಂಟ್ ಎವರೆಸ್ಟ್ ನಲ್ಲಿ ನಡೆದ ಭಯಾನಕ ಹಿಮಪಾತದ ನೈಜ್ಯ ದೃಶ್ಯಗಳು

Pinterest LinkedIn Tumblr

himaಬೆಂಗಳೂರು, ಏ.13- ಕಳೆದ 2014ರ ಏ.18ರಂದು ನೇಪಾಳದಲ್ಲಿ ಸಂಭವಿಸಿದ ಭೂ ಕಂಪನದಲ್ಲಿ ಮೌಂಟ್ ಎವರೆಸ್ಟ್ ಏರುತ್ತಿದ್ದ ಪರ್ವತಾರೋಹಿಗಳು ಅನುಭವಿಸಿದ ಕರಾಳ ದಿನಗಳ ಬಗ್ಗೆ ಡಿಸ್ಕವರಿ ಚಾನೆಲ್ ಇದೇ 18ರಂದು ರಾತ್ರಿ 9 ಗಂಟೆಗೆ ಪ್ರಸಾರ ಮಾಡುತ್ತಿದೆ. ಈ ಕರಾಳ ದಿನದ ಸಂಕಷ್ಟ ಎದುರಿಸಿದ ಅಸಂಖ್ಯ ಶೆರ್ಪಾ ಮತ್ತು ಅವರ ಕುಟುಂಬಗಳಿಗೆ ನಮನ ಸಲ್ಲಿಸಲು ಶೆರ್ಪಾ ಹೆಸರಿನ ಭಯಾನಕ ಹಿಮಪಾತದ ಹಿನ್ನೆಲೆಯಲ್ಲಿ ಮೌಂಟ್ ಎವರೆಸ್ಟ್ ಆರೋಹಣ ವೇಳೆ ನಡೆದ ಹಿಮ ಕುಸಿತ, ಅದರಿಂದ ಎದುರಾದ ಸಂಕಷ್ಟಗಳ ಬಗ್ಗೆ ಚಿತ್ರೀಕರಿಸಿರುವ ಅಪರೂಪ ದೃಶ್ಯಗಳ ಎರಡು ಗಂಟೆ ಕಾರ್ಯಕ್ರಮ ಮೂಡಿ ಬರಲಿದೆ.

ನೇರ ಘಟನೆಯನ್ನು ಚಿತ್ರೀಕರಿಸಿದವು, ಗೈಡ್‍ಗಳ ಧ್ವನಿಯಲ್ಲೇ ದಾಖಲಾಗಿರುವ ಅನುಭವಗಳು, ಅವರ ಕುಟುಂಬಗಳು ಮತ್ತು ದುರಂತ ಸಂಭವಿಸಿದಾಗ ಅಲ್ಲಿದ್ದ ಪರ್ವತಾರೋಹಿಗಳು, ಶೆರ್ಪಾಗಳು ಮತ್ತು ಅವರ ಕುಟುಂಬಗಳು ಇಂಥ ದುರ್ಘಟನೆಗಳನ್ನು ಎದುರಿಸುತ್ತಾ ಬಂದ ರೀತಿಯನ್ನು ಕಾರ್ಯಕ್ರಮ ರೋಚಕವಾಗಿ ವಿವರಿಸುವುದು. ಡಿಸ್ಕವರಿ ಪ್ರಸಾರ ಮಾಡುತ್ತಿರುವ ಶೆರ್ಪಾ ಗ್ಲೋಬಲ್ ಟೆಲಿವಿಷನ್‍ನಲ್ಲಿ ದೊಡ್ಡ ಈವೆಂಟ್ ಆಗಿದ್ದು, 220 ದೇಶಗಳಲ್ಲಿ ಪ್ರಸಾರವಾಗುತ್ತಿದೆ.

Write A Comment