ಕರ್ನಾಟಕ

ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಕೇಂದ್ರಗಳ ಸುತ್ತ ನಿಷೇಧಾಜ್ಞೆ

Pinterest LinkedIn Tumblr

meಬೆಂಗಳೂರು, ಏ.12- ನಗರದ ಎಂಟು ಕಡೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ಪರೀಕ್ಷಾ ಪಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಮೌಲ್ಯಮಾಪನ ಕೇಂದ್ರಗಳು ಇರುವ ಶಾಲಾ ಕಟ್ಟಡಗಳ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಕ್ ತಿಳಿಸಿದ್ದಾರೆ. ಏ.18ರಿಂದ ಬೆಳಗ್ಗೆ 6 ಗಂಟೆಯಿಂದ ಮೌಲ್ಯಮಾಪನ ಕಾರ್ಯ ಮುಕ್ತಾಯವಾಗುವವರೆಗೂ ದಿನದ 24 ಗಂಟೆಗಳ ಕಾಲ ಕೇಂದ್ರಗಳ ಸುತ್ತ ನಿಷೇಧಿತ ಪ್ರದೇಶವೆಂದು ಘೋಷಿಸಿ ಪ್ರತಿಬಂಧಕಾಯ್ದೆ ವಿಧಿಸಿರುವುದಾಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮೌಲ್ಯಮಾಪನವು ಜಯನಗರ ಆರ್‌ವಿ ರಸ್ತೆಯ ಬೆಂಗಳೂರು ಪ್ರೌಢಶಾಲೆ, ಆರ್‌ವಿ ಬಾಲಕಿಯರ ಪ್ರೌಢಶಾಲೆ, ಬಸವನಗುಡಿಯ ನ್ಯಾಷನಲ್ ಪ್ರೌಢಶಾಲೆ, ವಿಲ್ಸನ್ ಗಾರ್ಡನ್‌ನ ಹೊಂಬೇಗೌಡ ಬಾಲಕರ ಪ್ರೌಢಶಾಲೆ, ಜಯನಗರದ ರಾಣಿ ಸರಳಾದೇವಿ ಪ್ರೌಢಶಾಲೆ, ವಿಜಯನಗರದ ಸೆಂಟ್‌ಜಾನ್ ಪ್ರೌಢಶಾಲೆ, ನ್ಯೂ ಕೇಂಬ್ರಿಡ್ಜ್ ಪ್ರೌಢಶಾಲೆ, ಜಯನಗರ 4ನೆ ಬ್ಲಾಕ್‌ನ ಬೆಂಗಳೂರು ಪ್ರೌಢಶಾಲೆಯಲ್ಲಿ ನಡೆಯಲಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ಸುಗಮವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಸುವ ಹಿತದೃಷ್ಟಿಯಿಂದ ಈ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ದೂರದವರೆಗೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

Write A Comment