ಅಂತರಾಷ್ಟ್ರೀಯ

ವೀಸಾ ಅವಧಿ ಮೀರಿದ್ದರೂ ಅಲ್ಲೇ ಇರುವ 306 ಭಾರತೀಯ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಮುಂದಾದ ಅಮೇರಿಕಾ

Pinterest LinkedIn Tumblr

visaವಾಷಿಂಗ್ಟನ್, ಏ.12-ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಇಲ್ಲಿ ನೆಲೆಸಿರುವ 300ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಕುಟುಕು ಕಾರ್ಯಾಚರಣೆಯಲ್ಲಿ ಪತ್ತೆಯಾಗಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ಬಹುತೇಕ ಎಲ್ಲ ವಿದ್ಯಾರ್ಥಿಗಳೂ ಸ್ಟೂಡೆಂಟ್ಸ್ ವೀಸಾ ಆಧಾರದಲ್ಲಿ ಇಲ್ಲಿಗೆ ಬಂದಿದ್ದು, ವೀಸಾ ಅವಧಿ ಮುಗಿದಿದ್ದರೂ ಅವರೆಲ್ಲ ಅನಧಿಕೃತವಾಗಿ ಇಲ್ಲಿಯೇ ತಂಗಿದ್ದಾರೆ. ಹೋಮ್‌ಲ್ಯಾಂಡ್ ಭದ್ರತಾ ಇಲಾಖೆ ಮತ್ತಿತರ ಸಂಸ್ಥೆಗಳೊಂದಿಗೆ ನಡೆಸಿರುವ ಕುಟುಕು ಕಾರ್ಯಾಚರಣೆಯಲ್ಲಿ ಒಟ್ಟು 306 ಮಂದಿ ಇಂತಹ ವಿದ್ಯಾರ್ಥಿಗಳು ಸಿಕ್ಕುಬಿದ್ದಿದ್ದು, ಅವರ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರದ ಡೆಪ್ಯೂಟಿ ವಕ್ತಾರ ಮಾರ್ಕ್ ಟೋವರ್ ಹೇಳಿದ್ದಾರೆ.

ಈ ಕುಟುಕು ಕಾರ್ಯಾಚರಣೆ ಬಳಿಕ 11 ಮಂದಿ ಭಾರತೀಯರೂ ಸೇರಿದಂತೆ 21 ಮಂದಿ ಬ್ರೋಕರ್‌ಗಳು, ಮಧ್ಯವರ್ತಿಗಳನ್ನು ಬಂಧಿಸಲಾಗಿದೆ. ಅನಧಿಕೃತವಾಗಿ ನೆಲೆಸುವ ಪ್ರಯತ್ನ ನಡೆಸಿರುವ ವಿದ್ಯಾರ್ಥಿಗಳ ವಿರುದ್ಧ ಮಾತ್ರ ಕಾನೂನು ಕ್ರಮ ತೆಗೆದುಕೊಳ್ಳಲಿದ್ದು, ಎಲ್ಲ ದಾಖಲೆಗಳು, ವೀಸಾ ಸರಿಯಿರುವ ಯಾವುದೇ ವಿದ್ಯಾರ್ಥಿಗಳಿಗೂ ತೊಂದರೆ ಆಗಲು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

Write A Comment