ಕರ್ನಾಟಕ

ಸರ್ಕಾರದಲ್ಲಿ ಎಲ್ಲರೂ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ : ಆರ್.ಅಶೋಕ್

Pinterest LinkedIn Tumblr

aಚಿಕ್ಕಮಗಳೂರು, ಏ.12- ಮಂತ್ರಿಗಳಾಗಲಿ, ಆಡಳಿತ ಪಕ್ಷದ ಶಾಸಕರಾಗಲಿ ರಾಜ್ಯದ ಅಭಿವೃದ್ಧಿ ಕಡೆಗೆ ಕಿಂಚಿತ್ತೂ ಕೆಲಸ ಮಾಡದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಇಂದಿಲ್ಲಿ ಆರೋಪಿಸಿದ್ದಾರೆ.

ಯಾವುದೇ ಪ್ರಗತಿ ಕೆಲಸಗಳು ನಡೆಯದೆ ರಾಜ್ಯ ಸರ್ಕಾರದ ಆಡಳಿತ ಸಂಪೂರ್ಣ ನಿಷ್ಕ್ರಿಯಗೊಂಡಿದ್ದು, ಕರ್ನಾಟಕ ಅನಾಥವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ. ಮಂತ್ರಿಗಳು ಸಿಎಂ ಮನೆಗೆ, ಶಾಸಕರು ಗೃಹ ಸಚಿವರ ಮನೆಗೆ ಅಲೆದಾಡುತ್ತಿದ್ದಾರೆ. ಇದರಲ್ಲಿ ಕೆಲವರು ದೆಹಲಿ ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದ ಜನತೆ ಬಗ್ಗೆ ಚಿಂತೆಯಿಲ್ಲದೆ ಕೇವಲ ಸ್ವಾರ್ಥ ರಾಜಕಾರಣದಲ್ಲಿ ತೊಡಗಿದ್ದಾರೆ. ಬೆಲೆ ಏರಿಕೆಯ ಹೊರೆ ಹೊರಿಸಿ ರಾಜ್ಯ ಸರ್ಕಾರ ಜನರನ್ನು ಶೋಷಿಸುತ್ತಿದೆ ಎಂದು ಟೀಕಿಸಿದ್ದಾರೆ.

ಬರಗಾಲದ ಪ್ರದೇಶಗಳಿಗೆ ಕೂಡಲೇ ಭೇಟಿ ನೀಡಿ ಅಲ್ಲಿನ ಸಮಸ್ಯೆ ಅರಿತು ಪರಿಹಾರ ನೀಡುವತ್ತ ಸಿಎಂ ಚಿತ್ತ ಹರಿಸಬೇಕೆಂದು ಅವರು ಒತ್ತಾಯಿಸಿದರು. ಇದೇ ವೇಳೆ ಪಿಯು ಪರೀಕ್ಷೆ ಗೊಂದಲ ಸೃಷ್ಟಿಸಿಕೊಂಡು ಇಂದು ನಡೆದ ಪಿಯುಸಿ ರಸಾಯನಶಾಸ್ತ್ರ ಮರು ಪರೀಕ್ಷೆಗೆ ಪ್ರಶ್ನೆ ಪತ್ರೆಕೆಗಳನ್ನು ಎಕೆ47 ಹಿಡಿದು ಪೊಲೀಸರ ಸರ್ಪಗಾವಲಿನಲ್ಲಿ ಪರೀಕ್ಷಾ ಕೇಂದ್ರಗಳಿಗೆ ತಂದಿದ್ದಾರೆ. ಇದನ್ನು ನೋಡಿದರೆ ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎಂದು ತಿಳಿಯುತ್ತದೆ ಎಂದು ಹೇಳಿದ್ದಾರೆ.

Write A Comment