ಕರ್ನಾಟಕ

ರಾಜ್ಯಪಾಲ ವಿ.ಆರ್.ವಾಲಾ ಗಂಟು-ಮೂಟೆ ಕಟ್ಟಿಕೊಂಡು ಗುಜರಾತ್‌ಗೆ ಹೊರಡಲಿ

Pinterest LinkedIn Tumblr

rajaಬೆಂಗಳೂರು, ಏ.11-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಲು ನಿರಾಕರಿಸಿ ಅಹಂಕಾರ ಪ್ರದರ್ಶಿಸಿರುವ ರಾಜ್ಯಪಾಲ ವಿ.ಆರ್.ವಾಲಾ ಈ ಕೂಡಲೇ ರಾಜ್ಯದಿಂದ ಗಂಟು ಮೂಟೆ ಕಟ್ಟಿಕೊಂಡು ತೊಲಗಬೇಕು ಎಂದು ಕನ್ನಡ ಚಳವಳಿ ಕೇಂದ್ರ ಸಮಿತಿ ಒತ್ತಾಯಿಸಿದೆ. ಕಳೆದ ವಾರ ಎಸಿಬಿ ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಉಳಿಸುವಂತೆ ಮನವಿ ಸಲ್ಲಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ರಾಜಭವನಕ್ಕೆ ಭೇಟಿ ನೀಡಿದ್ದರು. ಆದರೆ ವಿ.ಆರ್.ವಾಲಾ ಅವರು ತಮ್ಮ ಅಹಂಕಾರ ಪ್ರದರ್ಶಿಸಿ ದೇವೇಗೌಡರನ್ನು ಭೇಟಿಯಾಗಲು ನಿರಾಕರಿಸಿದ್ದಾರೆ.

ಅವರ ಈ ವರ್ತನೆ ಕೇವಲ ದೇವೇಗೌಡರಿಗೆ ಮಾತ್ರ ಮಾಡಿದ ಅಪಮಾನವಲ್ಲ, ಬದಲಾಗಿ ಎಲ್ಲಾ ಕನ್ನಡಿಗರಿಗೆ ಮಾಡಿದ ಅಪಮಾನ ಎಂದು ಸಮಿತಿ ಅಧ್ಯಕ್ಷ ಗುರುದೇವ್ ನಾರಾಯಣ್‌ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ಹೇಳಿದ್ದಾರೆ. ಕರ್ನಾಟಕದ ರಾಜ್ಯಪಾಲರಾದ ಮೇಲೆ ಈ ನಾಡಿನ ಕನಿಷ್ಠ ಪ್ರಜೆಯನ್ನೂ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ನೀಡಬೇಕಾದುದು ಅವರ ಕರ್ತವ್ಯ. ಆದರೆ ಈ ದೇಶದ ಪ್ರಧಾನಿಯಾಗಿದ್ದ ದೇವೇಗೌಡರನ್ನು ಸೌಜನ್ಯಕ್ಕೂ ಭೇಟಿ ಮಾಡದ ವಾಲಾ ಅವರು ಉತ್ತರ ಮತ್ತು ದಕ್ಷಿಣ ಭಾರತ ಎಂಬ ಭೇದಭಾವವನ್ನು ಪ್ರದರ್ಶಿಸಿದ್ದಾರ ಎಂದು ಗುರುದೇವ್ ದೂರಿದರು.

ಇಂತಹ ರಾಜ್ಯಪಾಲ ನಮ್ಮ ಕನ್ನಡ ನಾಡಿಗೆ ಅನರ್ಹ. ಈ ಕೂಡಲೇ ಗುಜರಾತ್‌ನ ವಜೂಭಾಯಿ ವಾಲಾ ಅವರು ತಮ್ಮ ಗುಜರಾತಿ ಸಿಬ್ಬಂದಿಯೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಗುಜರಾತ್‌ಗೆ ತೊಲಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Write A Comment