ಕರ್ನಾಟಕ

ಕಾಡಾನೆಗಳ ಹಿಂಡು ದಾಳಿ : ರೈತರ ಬೆಳೆದಿದ್ದ ಮಾವು, ತೆಂಗು ತೋಟಗಳು ಸಂಪೂರ್ಣ ನಾಶ

Pinterest LinkedIn Tumblr

magadiಮಾಗಡಿ, ಏ.11-ಕಾಡಾನೆಗಳ ಹಿಂಡು ದಾಳಿ ಮಾಡಿರುವುದರಿಂದ ಸಾವನದುರ್ಗದ ತಪ್ಪಲಿನಲ್ಲಿ ಇರುವ ಗುಡ್ಡಹಳ್ಳಿ ಗ್ರಾಮದ ಹತ್ತಾರು ರೈತರ ಮಾವು, ತೆಂಗು, ಸಿಹಿಕುಂಬಳ, ತೋಟಗಳು ಸಂಪೂರ್ಣವಾಗಿ ನಾಶವಾಗಿವೆ. ಸಾವನದುರ್ಗದ ಅರಣ್ಯದಿಂದ ರೈತರ ಹೊಲ ಗದ್ದೆ, ತೋಟಗಳತ್ತ ನುಗ್ಗಿ ಬರುವ ಕಾಡಾನೆಗಳ ಹಿಂಡು, ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿವೆ ಎಂದು ಪ್ರಗತಿಪರ ರೈತ ಕುಂಬಳಕಾಯಿ ಗಂಗಣ್ಣ ತಿಳಿಸಿದ್ದಾರೆ.

ರಂಗಪ್ಪ ಅವರಿಗೆ ಸೇರಿದ ತೆಂಗು, ಬಾಳೆ, ಮಾವು, ಕೃಷ್ಣಪ್ಪ ಅವರ ಮಾವಿನ ಮರಗಳು, ಕುಂಬಳಕಾಯಿ ಗಂಗಣ್ಣ ಅವರಿಗೆ ಸೇರಿಸುವ 500 ಗುಣಿಗಳಲ್ಲಿ ಹುಲುಸಾಗಿ ಬೆಳೆದಿದ್ದ ಸಿಹಿ ಕುಂಬಳ ಕಾಯಿಗಳನ್ನು ತಿಂದು ನಾಶ ಮಾಡಿವೆ. ಸರ್ಕಾರ ಕಾಡಾನೆಗಳ ಹಾವಳಿಯಿಂದ ಬೆಳೆ ನಾಶಕ್ಕೆ ಕೇವಲ ಎಕರೆ ರೂ.500 ಪರಿಹಾರ ನೀಡುತ್ತಿದೆ. ನೋವುಂಡ ರೈತರು ಪರಿಹಾರ ಪಡೆಯಲು ಕಂಬ ಸುತ್ತಿ ಬೆಟ್ಟಹತ್ತಿ ಆಳಕ್ಕೆ ಇಳಿಯಬೇಕಿದೆ ಎಂದು ಗಂಗಣ್ಣ ತಿಳಿಸಿದ್ದಾರೆ.

Write A Comment