ಕರಾವಳಿ

ಕೇರಳ ಸುಡುಮದ್ದು ದುರಂತ : ಕೊಲ್ಲಂನ ಸಂತ್ರಸ್ತರಿಗೆ ಪ್ರದೀಪ ಕುಮಾರ ಕಲ್ಕೂರ ಸಾಂತ್ವನ

Pinterest LinkedIn Tumblr

Kalkura-_kerala_Spandane

ಮಂಗಳೂರು : ಕೇರಳದ ಕೊಲ್ಲಂನಲ್ಲಿ ನಡೆದ ದುರ್ಘಟನೆಯಲ್ಲಿ ಮಡಿದವರ, ಸಂತ್ರಸ್ತರ, ಸರ್ವರಿಗೂ ಮತ್ತು‌ ಎಲ್ಲಾ ಕುಟುಂಬದವರಿಗೂ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ. ಗಾಯಾಳುಗಳು ಶೀಘ್ರ ಗುಣಮುಖವಾಗಲಿ ಎಂದು ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ‌ ಎಸ್. ಪ್ರದೀಪಕುಮಾರ ಕಲ್ಕೂರ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ.

ದೊಡ್ಡ ಪ್ರಮಾಣದಲ್ಲಿ ಧಾರ್ಮಿಕ ಸಮಾರಂಭಗಳಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಸಿಡಿ ಮದ್ದು ಪ್ರದರ್ಶನ, ಸಿಡಿಮದ್ದು ಸುಡುವ ಪ್ರಕ್ರಿಯೆಯನ್ನುಧಾರ್ಮಿಕ ಮುಖಂಡರುಗಳು, ಸಾಮಾಜಿಕ ಮುಖಂಡರುಗಳು ಒಟ್ಟಾಗಿ ಸೇರಿ ವಿಮರ್ಶಿಸುವ ಅನಿರ್ವಾಯತೆ ಪ್ರಸ್ತುತ ಸನ್ನಿವೇಶದಲ್ಲಿದೆ. ಕೊಲ್ಲಂನ ದುರ್ಘಟನೆಯನ್ನು ಆದರಿಸಿ ಮುಖಂಡರುಗಳು ಒಟ್ಟಾಗಿ ಚಿಂತಿಸಿ ಈ ಬಗ್ಗೆ ಒಟ್ಟು‌ಅಭಿಪ್ರಾಯವನ್ನು ಕಂಡುಕೊಳ್ಳುವುದು ಒಳಿತು.

ಸಾರ್ವಜನಿಕ, ಧಾರ್ಮಿಕ ಸಮಾರಂಭಗಳಲ್ಲಿ ದೊಡ್ಡ ಪ್ರಮಾಣದ ಸಿಡಿಮದ್ದುಗಳನ್ನು ನಿಷೇದಿಸಿ ಸಾಂಕೇತಿಕವಾಗಿ ಸಾಂಪ್ರದಾಯಿಕ ನೆಲೆಯಲ್ಲಿ ಸಿಡಿಮದ್ದು ಹಾಗೂ ದುರ್ಸು ಪಟಾಕಿಗಳನ್ನು ಸಿಡಿಸುವುದು ಸೂಕ್ತ ಎಂದು ತಮ್ಮ‌ ಅಭಿಪ್ರಾಯ ವ್ಯಕ್ತಪಡಿಸಿದರು.

ಯಾವುದೇ ಸಾರ್ವಜನಿಕ ಸಂಭ್ರಮಾಚರಣೆಯ ನೆಪದಲ್ಲಿದೊಡ್ಡ ಪ್ರಮಾಣದ ಸಿಡಿ ಮದ್ದುಗಳ ಪ್ರದರ್ಶನವನ್ನು ಸರಕಾರ ನಿಷೇದಿಸುವುದು ಒಳಿತೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Write A Comment