ಕರ್ನಾಟಕ

ಕಕ್ಕೇನಹಳ್ಳಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಎತ್ತುಗಳು ಸಾವು

Pinterest LinkedIn Tumblr

sidiluಹಾಸನ, ಏ.9- ಸಿಡಿಲು ಬಡಿದು ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಕಕ್ಕೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವೇಗೌಡ ಅವರಿಗೆ ಸೇರಿದ ಎರಡು ಎತ್ತುಗಳು ಒಂದೂವರೆ ಲಕ್ಷ ರೂ. ಬೆಲೆಬಾಳುತ್ತಿದ್ದು, ಕಳೆದ ತಿಂಗಳು ನಡೆದ ದನಗಳ ಜಾತ್ರೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದವು. ಮನೆ ಹೊರಗಿನ ಮರಕ್ಕೆ ಕಟ್ಟಿಹಾಕಿದ್ದ ಸಂದರ್ಭದಲ್ಲಿ ಇಂದು ಮುಂಜಾನೆ 4.30ರಲ್ಲಿ ಸುರಿದ ಭಾರೀ ಮಳೆ ಜತೆ ಸಿಡಿಲು ಬಡಿದು ಸಾವನ್ನಿಪ್ಪಿವೆ.

ಎತ್ತುಗಳನ್ನು ಕಳೆದುಕೊಂಡ ಶಿವೇಗೌಡ ಕಂಗೆಟ್ಟಿದ್ದು, ಅಧಿಕ ಮೌಲ್ಯದ ಎತ್ತುಗಳಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದವು. ಎತ್ತುಗಳ ಸಾವಿನಿಂದ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಕಿದ್ದು, ದಿಕ್ಕು ತೋಚದಂತಾಗಿದೆ ಎಂದು ಶಿವೇಗೌಡ ಅಳಲು ತೋಡಿಕೊಂಡಿದ್ದಾರೆ.

Write A Comment