ರಾಷ್ಟ್ರೀಯ

ಕರ್ನೂಲು ಜಿಲ್ಲೆಯಲ್ಲಿ ಯುಗಾದಿಯ ವಿಶಿಷ್ಟ ಆಚರಣೆ

Pinterest LinkedIn Tumblr

kurnool-ugadi-celebrationಕರ್ನೂಲು: ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಕೈರುಪ್ಪಲ ಮತ್ತು ಕಲ್ಲೂರು ಗ್ರಾಮಸ್ಥರು ಯುಗಾದಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಿದ್ದಾರೆ.
ಯುಗಾದಿ ಸಂದರ್ಭದಲ್ಲಿ ಈ ಗ್ರಾಮಗಳಲ್ಲಿ ವೀರಭದ್ರ ಸ್ವಾಮಿಯ ಮೆರವಣಿಗೆ ನಡೆಯುತ್ತದೆ. ಆಗ ಭಕ್ತರೆಲ್ಲಾ ಸೇರಿಕೊಂಡು ಸೆಗಣಿಯಿಂದ ಮಾಡಿದ ಕೇಕಿನ ಜೊತೆ ಜಗಳವಾಡುತ್ತಾರೆ. ಇದರಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಆದರೂ ಯಾರೊಬ್ಬರೂ ಪೊಲೀಸರಿಗೆ ದೂರು ನೀಡಿಲ್ಲ ಎಂದು ವೀರಭದ್ರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಜಿ.ರಾಮಪ್ರಸಾದ್ ತಿಳಿಸಿದ್ದಾರೆ.
ಕೈರುಪ್ಪಲ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ನಡೆದುಕೊಂಡು ಸಂಪ್ರದಾಯದಲ್ಲಿ ವೀರಭದ್ರ ಸ್ವಾಮಿಯನ್ನು ಗ್ರಾಮದಿಂದ ಹೊರ ತೆಗೆದುಕೊಂಡು ಹೋಗಲಾಗುತ್ತದೆ. ಮತ್ತೆ ಗ್ರಾಮದೊಳಗೆ ತರಬೇಕಾದರೆ ಒಂದು ಗುಂಪಿನ ಜನರು ತಡೆಯುತ್ತಾರೆ. ಗ್ರಾಮಸ್ಥರ ಮತ್ತೊಂದು ಗುಂಪು ಮಧ್ಯ ಪ್ರವೇಶಿಸಿ ಎರಡೂ ಗುಂಪಿನವರು ಪರಸ್ಪರ ಸೆಗಣಿಯ ತುಂಡುಗಳನ್ನು ಎಸೆಯುತ್ತಾರೆ. ಜಗಳ ಮಾಡುತ್ತಾ ದೇವರ ಮೂರ್ತಿಯನ್ನು ತೆಗೆದುಕೊಂಡು ಹೋಗಿ ದೇವಾಲಯದ ಗರ್ಭಗುಡಿಯ ಒಳಗೆ ಇಡುತ್ತಾರೆ. ಅನೈತಿಕ ಸಂಬಂಧದಿಂದಾಗಿ ವೀರಭದ್ರ ಸ್ವಾಮಿ ಮತ್ತು ಭದ್ರಕಾಳಿ ಕೆಲವು ಸಮಯಗಳವರೆಗೆ ದೂರ ದೂರವಾಗುತ್ತಾರೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಎರಡು ಗುಂಪುಗಳಾಗಿ ಕೆಲವರು ದೇವರ ಪರ, ಇನ್ನು ಕೆಲವರು ದೇವತೆ ಪರ ವಾದ ಮಾಡುತ್ತಾ ಜಗಳವಾಡುತ್ತಾರೆ. ಪ್ರತಿ ಯುಗಾದಿಗೆ ಈ ಸಂಪ್ರದಾಯ ಇಲ್ಲಿ ಇವೆ.
ಇದೇ ರೀತಿ ಕಲ್ಲೂರು ಗ್ರಾಮದಲ್ಲಿ ಚೌಡೇಶ್ವರಿ ಉತ್ಸವವನ್ನು ಕೂಡ ವಿಶಿಷ್ಟ ರೀತಿಯಲ್ಲಿ ಆಚರಿಸುತ್ತಾರೆ. ದೇವಸ್ಥಾನದ ಹತ್ತಿರ ಮೂರು ಅಡಿ ಆಳದವರೆಗೆ ಕೆಸರನ್ನು ಹಾಕಲಾಗುತ್ತದೆ. ಕತ್ತೆಗಳನ್ನು ಬಂಡಿಯಲ್ಲಿ ಕಟ್ಟಿ ಅದರ ಸುತ್ತಲೂ ತಿರುಗಲು ಹೇಳಲಾಗುತ್ತದೆ. ಇದಕ್ಕೆ ಗಡಿದಾಳ ಪ್ರದಕ್ಷಿಣೆ ಎಂದು ಕರೆಯುತ್ತಾರೆ. ಈ ಆಚರಣೆಯಲ್ಲಿ ಸುತ್ತಮುತ್ತಲ ರಾಜಕೀಯ ವ್ಯಕ್ತಿಗಳು, ಗಣ್ಯರು ಭಾಗವಹಿಸುತ್ತಾರೆ.

Write A Comment