ಕರ್ನಾಟಕ

ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತ ಇಬ್ಬರು ದೈಹಿಕ ಶಿಕ್ಷಕರು 9 ದಿನ ಸಿಐಡಿ ಕಸ್ಟಡಿಗೆ

Pinterest LinkedIn Tumblr

arrested1-715x400

ಬೆಂಗಳೂರು: ದ್ವಿತೀಯ ಪಿಯುಸಿ ರಸಾಯನ ಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ನಿನ್ನೆ ಬಂಧಿತರಾಗಿದ್ದ ದೈಹಿಕ ಶಿಕ್ಷಕ ಅನಿಲ್ ಮತ್ತು ಸತೀಶ್ ಅವರನ್ನು ಸಿಐಡಿಗೆ ಕಸ್ಟಡಿಗೆ ನೀಡಲಾಗಿದೆ.

ಮಲ್ಲೇಶ್ವರಂ ನಿವಾಸಿಯಾಗಿರುವ ಸದಾಶಿವನಗರದ ಪೂರ್ಣ ಪ್ರಜ್ಞ ಕಾಲೇಜಿನ ದೈಹಿಕ ಶಿಕ್ಷಕ ಅನಿಲ್ ಹಾಗೂ ಮತ್ತಿಕೆರೆ ನಿವಾಸಿ ಅರಮನೆ ರಸ್ತೆಯ ಗುಟ್ಟಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಸತೀಶ್ ಅವರನ್ನು ಪ್ರಶ್ನೆ ಪತ್ರಿಕೆ ಮಾರಾಟ ಜಾಲದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ ಸಿಐಡಿ ಅಧಿಕಾರಿಗಳು ಬಂಧಿಸಿ, ಇಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್ ಇಬ್ಬರು ಆರೋಪಿಗಳನ್ನು 9 ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶ ಹೊರಡಿಸಿದೆ. ಬಂಧಿತ ಅನಿಲ್ ಮತ್ತು ಸತೀಶ್ ಸೋಮವಾರ ಬಂಧಿತನಾದ ಮಂಜುನಾಥ್ ಸ್ನೇಹಿತರು. ಮಂಜುನಾಥ್ ಪ್ರಶ್ನೆ ಪತ್ರಿಕೆಯನ್ನು ಅನಿಲ್ ಮತ್ತು ಸತೀಶ್ ಗೆ ಮಾರಾಟ ಮಾಡಿದ್ದರು. ಈ ಇಬ್ಬರು ಆರೋಪಿಗಳು ಅದನ್ನು ವಿದ್ಯಾರ್ಥಿಗಳಿಗೆ ಮಾರಾಟ ಮಾಡಿದ್ದರು ಎಂದು ಆರೋಪಿಸಲಾಗಿದೆ.

Write A Comment