ರಾಷ್ಟ್ರೀಯ

ಸೊಸೆ ಕೊಲೆ: ಬಿಎಸ್ಪಿ ಸಂಸದ ನರೇಂದ್ರ ಕಶ್ಯಪ್, ಪತ್ನಿ ಹಾಗೂ ಪುತ್ರನ ಬಂಧನ

Pinterest LinkedIn Tumblr

himanshi

ಘಾಜಿಯಾಬಾದ್: ಸೊಸೆ ನಿಗೂಢ ಹತ್ಯೆ ಪ್ರಕರಣ ಸಂಬಂಧ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ರಾಜ್ಯಸಭಾ ಸದಸ್ಯ ನರೇಂದ್ರ ಕಶ್ಯಪ್ ಹಾಗೂ ಅವರ ಪತ್ನಿ ಮತ್ತು ಪುತ್ರನನ್ನು ಗುರುವಾರ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.

ಸಂಸದನ ಸೊಸೆ ಹಿಮಾಂಶಿಯನ್ನು ನಿನ್ನೆ ಹಣೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಹಿಮಾಂಶಿಯ ಪತಿ ಹಾಗೂ ಸಂಸದ ನರೇಂದ್ರ ಕಶ್ಯಪ್ ಅವರ ಪುತ್ರ ಸಾಗರ್ ನನ್ನು ಇಂದು ಬೆಳಗ್ಗೆ ಬಂಧಿಸಿದ್ದರು. ಇದೀಗ ಸಂಸದ ಹಾಗೂ ಅವರ ಪತ್ನಿಯನ್ನು ಬಂಧಿಸಲಾಗಿದೆ.
ಸಂಸದನ ಕುಟುಂಬದ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ.

ಹಿಮಾಂಶಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 498ಎ ಮತ್ತು 304ಬಿ ಅಡಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಘಾಜಿಯಾಬಾದ್ ಪೊಲೀಸ್ ವರಿಷ್ಠಾಧಿಕಾರಿ ಸಲ್ಮಾನ್ ತಾಜ್ ಅವರು ತಿಳಿಸಿದ್ದಾರೆ.

ನರೇಂದ್ರ ಕಶ್ಯಪ್ ಅವರ ಕುಟುಂಬ ಎರಡು ವೇಪನ್ ಗಳನ್ನು ಹೊಂದಿದ್ದು, 26 ವರ್ಷದ ಹಿಮಾಂಶಿಯನ್ನು ಗನ್ ಅಥವಾ ಪಿಸ್ತೂಲ್ ನಿಂದ ಹತ್ಯೆ ಮಾಡಲಾಗಿದೆಯೇ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯ ಸ್ಪಷ್ಟಪಡಿಸಬೇಕಿದೆ. 2014ರ ಜೂನ್ ನಲ್ಲಿ ನರೇಂದ್ರ ಕಶ್ಯಪ್ ಅವರ ಪುತ್ರ ಸಾಗರ್ ಅವರೊಂದಿಗೆ ಹಿಮಾಂಶಿ ಅವರ ಮದುವೆಯಾಗಿತ್ತು.

Write A Comment