ಮನೋರಂಜನೆ

ಡಿನ್ನರ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಕೊಹ್ಲಿ-ಅನುಷ್ಕಾ !

Pinterest LinkedIn Tumblr

ddd

ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಅವರ ಮುರಿದ ಸಂಬಂಧ ಮತ್ತೆ ಒಂದುಗೂಡುತ್ತಿದೆಯೇ? ಹೌದು ಎನ್ನುತ್ತಿವೆ ಬಾಲಿವುಡ್ ಮೂಲಗಳು.

ವೃತ್ತಿಪರ ಜೀವನದಲ್ಲಿ ಏಳ್ಗೆ ಕಾಣುವ ನಿಟ್ಟಿನಸ್ಸಿ ಪರಸ್ಪರ ಬೇರೆ ಬೇರೆಯಾಗಿದ್ದ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಮತ್ತೆ ಒಂದಾಗುವತ್ತ ಹೆಜ್ಜೆ ಇಟ್ಟಿದೆಯಂತೆ. ಇದಕ್ಕೆ ಪೂರಕವೆಂಬಂತೆ ನಿನ್ನೆ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಒಟ್ಟಿಗೇ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಛಾಯಾಗ್ರಾಹಕ ಯೋಗೇನ್ ಶಾ ಎನ್ನುವವರು ಈ ಚಿತ್ರವನ್ನು ಕ್ಲಿಕ್ಕಿಸಿದ್ದಾರೆ. ಅಲ್ಲದೆ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರುವ ಯೋಗೇನ್ ಶಾ, ಜೋಡಿ ಹಕ್ಕಿಗಳು ಮತ್ತೆ ಒಂದಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಮುಂಬೈಗೆ ಆಗಮಿಸಿದ್ದ ವಿರಾಟ್ ಕೊಹ್ಲಿ ಬುಧವಾರ ರಾತ್ರಿ ಅನುಷ್ಕಾರೊಂದಿಗೆ ಮುಂಬೈನ ಬಾಂದ್ರಾದಲ್ಲಿರುವ ಪ್ರತಿಷ್ಠಿತ ಹೊಟೆಲ್ ವೊಂದರಲ್ಲಿ ರಾತ್ರಿ ಡಿನ್ನರ್ ಪಾರ್ಟಿ ಮಾಡಿ ಒಟ್ಟಿಗೆ ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವಿರಾಟ್-ಅನುಷ್ಕಾ ಬ್ರೇಕ್ ಅಪ್ ಸಮಾಚಾರ ಸಾಕಷ್ಟು ದಿನಗಳಿಂದ ಚರ್ಚೆಗೀಡಾಗುತಿತ್ತಾದರೂ, ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದ ಟ್ವಿಟರ್ ನಲ್ಲಿ ಆನುಷ್ಕಾರನ್ನು ವ್ಯಾಪಕವಾಗಿ ಟೀಕಿಸಲಾಗಿತ್ತು. ಈ ಘಟನೆಯನ್ನು ತೀವ್ರವಾಗಿ ಟೀಕಿಸಿದ್ದ ಕೊಹ್ಲಿ ಟೀಕಿಸಿದವರಿಗೆ ನಾಚಿಕೆಯಾಗಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು. ಇನ್ನು ಈ ಹಿಂದೆ ಚಂಡೀಗಡ್ ನಲ್ಲಿ ಸುಲ್ತಾನ್ ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ಅನುಷ್ಕಾ ಚಿತ್ರೀಕರಣವನ್ನು ಅರ್ಧಕ್ಕೇ ನಿಲ್ಲಿಸಿ ಕೊಹ್ಲಿಯನ್ನು ನೋಡಲು ಮುಂಬೈಗೆ ಆಗಮಿಸಿದ್ದರು ಎಂಬ ಊಹಾಪೋಹಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಒಟ್ಟಾರೆ ಸಾಕಷ್ಟು ಚರ್ಚೆಯಾಗುತ್ತಿದ್ದ ಮುರಿದು ಬಿದ್ದ ಕೊಹ್ಲಿ-ವಿರಾಟ್ ಸ್ನೇಹಸಂಬಂಧ ಇದೀಗ ಮತ್ತೆ ಟ್ರ್ಯಾಕ್ ಮರಳಿರುವುದು ಅವರ ಅಭಿಮಾನಿಗಳಲ್ಲಿ ಸಂತಸ ತಂದಿರಬಹುದು.

Write A Comment