ರಾಷ್ಟ್ರೀಯ

ಬರಪೀಡಿತ ಮಧ್ಯಪ್ರದೇಶದಲ್ಲಿ ಉತ್ತರಪ್ರದೇಶದ ರೈತರು ನೀರು ಕದಿಯದಂತೆ ತಡೆಯಲು ನೀರು ಕಾಯಲು ಶಾಸ್ತ್ರಾಸ್ತ್ರ ಸಹಿತ ಸಿಬ್ಬಂದಿ ನೇಮಕ

Pinterest LinkedIn Tumblr

madhya-pradesh-army

ಟೀಕಾಮಾರ್ಗ್: ಬಿರು ಬೇಸಿಗೆಯಲ್ಲಿ ದೇಶದೆಲ್ಲೆಡೆ ನೀರಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಪರಿಸ್ಥಿತಿಯಲ್ಲಿ ಮಧ್ಯಪ್ರದೇಶದ ಬರಪೀಡಿತ ಟೀಕಾಮಾರ್ಗ್ ಜಿಲ್ಲೆಯಲ್ಲಿ ಜಾಮ್ನಿ ನದಿಯ ನೀರು ಕಾಯಲು ಮತ್ತು ಉತ್ತರಪ್ರದೇಶದ ರೈತರು ನೀರು ಕದಿಯದಂತೆ ತಡೆಯಲು ರಾಜ್ಯದ ಆಡಳಿತಶಾಹಿ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯನ್ನು ನೇಮಿಸಿದೆ.

ಬುಂದೇಲಖಂಡ ಪ್ರದೇಶದಲ್ಲಿರುವ ಟೀಕಾಮಾರ್ಗ್ ನಲ್ಲಿ ನೀರಿಗಾಗಿ ಕಾದಾಟಗಳು ಮತ್ತು ಉದ್ವಿಗ್ನ ಸನ್ನಿವೇಶಗಳು ಸಾಮಾನ್ಯವಾಗಿವೆ.

ಪ್ರತಿ ನಾಲ್ಕು ದಿನಗಳಿಗೊಮ್ಮೆ ಮಾತ್ರ ನೀರಿನ ಟ್ಯಾಂಕರ್ ಮಾತು ಪೈಪ್ಲೈನ್ ಮೂಲಕ ಪುರಸಭೆ ನೀರು ಸರಬರಾಜು ಮಾಡುವುದರಿಂದ ನೀರಿಗಾಗಿ ಕಾದಾಟಗಳು ಸಾಮಾನ್ಯವಾಗಿವೆ.

ಕಳೆದ ಮೂರು ವರ್ಷಗಳಿಂದ ಬರಪೀಡಿದ ಟೀಕಾಮಾರ್ಗ್ ನಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ. ಜಿಲ್ಲೆಯಲ್ಲಿ ಜನಸಂಖ್ಯೆ ಒಂದು ಲಕ್ಷಕ್ಕೂ ಹೆಚ್ಚಿದ್ದು, ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು ಪರಿಸ್ಥಿತಿ ದಿನೇದಿನಕ್ಕೆ ಕರಾಳವಾಗುತ್ತಿದೆ.

ಆದುದರಿಂದ ಪುರಸಭೆ ಜಾಮ್ನಿಯಲ್ಲಿ ಉಳಿದಿರುವ ನೀರನ್ನು ಸಂರಕ್ಷಿಸಲು ಅನ್ಯ ಮಾರ್ಗವಿಲ್ಲದೆ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಯನ್ನು ನೇಮಿಸಿದೆ. ೮ ಘಂಟೆಯ ಪಾಳೆಯಗಳಲ್ಲಿ ಈ ಸಿಬ್ಬಂದಿಗಳು ದಿನ ರಾತ್ರಿ ನೀರನ್ನು ಕಾಯುತ್ತಿದ್ದಾರೆ ಎನ್ನಲಾಗಿದೆ.

ರೈತರು ನೀರು ಕದಿಯದಂತೆ ತಡೆಯಲು ೧೦ ಜನ ಶಸ್ತ್ರಾಸ್ತ್ರ ಸಹಿತ ಸಿಬ್ಬಂದಿಗಳನ್ನು ನೇಮಿಸಿದ್ದೇವೆ ಎಂದು ನಗರ ಪಾಲಿಕೆ ಅಧ್ಯಕ್ಷ ಲಕ್ಷ್ಮಿ ಗಿರಿ ಹೇಳಿದ್ದಾರೆ.

Write A Comment