ಮನೋರಂಜನೆ

ಮತ್ತೆ ಪನಾಮ ಪೇಪರ್ಸ್ ಲೀಕ್: ಪಟ್ಟಿಯಲ್ಲಿ ಕರೀನಾ ಕಪೂರ್, ಸೈಫ್ ಅಲಿಖಾನ್

Pinterest LinkedIn Tumblr

Kareena Kapoor, Saif Ali Khan And Karisma Kapoor

ನವದೆಹಲಿ: ದೇಶದ್ಯಾಂತ ತೀವ್ರ ಸಂಚಲನ ಮೂಡಿಸಿರುವ ಪನಾಮ ಪೇಪರ್ ದಾಖಲೆ ಸೋರಿಕೆಯಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಆತನ ಪತ್ನಿ ಹಾಗೂ ನಟಿ ಕರೀನಾ ಕಪೂರ್ ಖಾನ್ ಹಾಗೂ ಉದ್ಯಮಿ ವೇಣುಗೋಪಾಲ್ ದೂತ್ ಹೆಸರುಗಳು ಕೇಳಿ ಬಂದಿವೆ.

ಭಾರತದಲ್ಲಿ ತೆರಿಗೆ ವಂಚಿಸಿ ವಿದೇಶದಲ್ಲಿ ಯಾರೆಲ್ಲಾ ಅಕ್ರಮ ಸಂಪತ್ತನ್ನು ಹೊಂದಿದ್ದಾರೆ ಎಂಬ ಮಾಹಿತಿ ಪನಾಮ ಪೇಪರ್ ಸೋರಿಯಿಂದ ಬಯಲಾಗಿತ್ತು. ಇದರಲ್ಲಿ ಬಾಲಿವುಡ್ ನಟ ಅಮಿತಾಬ್ ಬಚ್ಚನ್, ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಅವರ ಹೆಸರು ಕೇಳಿ ಬಂದಿತ್ತು. ಇನ್ನು ಪುಣೆ ಮೂಲದ ಹಲವು ಉದ್ಯಮಿಗಳು ಐಪಿಎಲ್ ಪ್ರಾಂಚೈಸಿಗಳ ಹೆಸರು ಪನಾಮ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಐಪಿಎಲ್ ಪುಣೆ ಪ್ರಾಂಚೈಸಿಯಲ್ಲಿ ಶೇ.33 ರಷ್ಟು ಚೋರ್ಡಿಯಾ ಕುಟುಂಬ, ಶೇ. 4.5 ಷೇರು ಕರೀನಾ ಮತ್ತು ಕರೀಷ್ಮಾ, ಹಾಗೂ ಸೈಫ್ ಆಲಿ ಖಾನ್ ಶೇ. 9ರಷ್ಟು ಹಣ ಹೂಡಿದ್ದಾರೆ, ಹಾಗೂ ಮುಂಬಯಿ ಉದ್ಯಮಿ ಮನೋಜ್ ಎಸ್ ಜೈನ್ ಶೇ 25, ರಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಇನ್ನು ಈ ಬಗ್ಗೆ ಕರೀನಾ ಕಪೂರ್ ಅವರ ಪ್ರತಿಕ್ರಿಯೆ ಕೇಳಲು ಪತ್ರಿಕೆ ಸಂಪರ್ಕಿಸಿದಾಗ ಆಕೆ ಇಲ್ಲವೆಂದು ಹೇಳಿದೆ. ಸೈಫ್ ಅಲಿಖಾನ್ ಕರೀಷ್ಮಾ ಕೂಡ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

Write A Comment