ಕರ್ನಾಟಕ

ಬೆಂಗಳೂರಿನಲ್ಲಿ ಮಿನಿ ತಾಜ್‍ಮಹಲ್ ನಿರ್ಮಾಣ!

Pinterest LinkedIn Tumblr

taj-mahal in bangalore

ಬೆಂಗಳೂರು: ಪ್ರೇಮಸೌಧ ತಾಜ್ ಮಹಲ್ ಮುಂದೆ ಸೆಲ್ಫಿ ತೆಗೆದಕೊಳ್ಳುವ ಆಸೆ ನಿಮಗಿದೆಯಾ? ಆದ್ರೆ ಸದ್ಯಕ್ಕೆ ಅಲ್ಲಿ ತನಕ ಹೋಗೋಕ್ಕೆ ಆಗಲ್ಲ ಅಂತ ಬೇಸರವೂ ಇದೆಯಾ? ಚಿಂತಿಸಬೇಡಿ ನಿಮ್ಮ ಆಸೆ ಈಗ ಬೆಂಗಳೂರಿನಲ್ಲೇ ಈಡೇರುತ್ತೆ.

ಹೌದು ಪ್ರೇಮಿಗಳ ಸ್ವರ್ಗ ಅಂತ ಕರೆಯೋ ತಾಜ್‍ಮಹಲ್‍ನ ಪ್ರತಿಕೃತಿಯನ್ನ ಬೆಂಗಳೂರಿನ ಕಮರ್ಶಿಯಲ್ ಸ್ಟ್ರೀಟ್ ಬಳಿರುವ ಆರ್‍ಬಿಎಎನ್‍ಎಮ್ ಶಾಲೆ ಆವರಣದಲ್ಲಿ ನಿರ್ಮಾಣ ಮಾಡಲಾಗಿದೆ. ಸುಮಾರು ಅರ್ಧ ಎಕರೆ ವಿಸ್ತಿರ್ಣದಲ್ಲಿ ನಿರ್ಮಾಣವಾಗಿರೋ ಈ ಪ್ರೇಮಸೌಧದ ಪ್ರದರ್ಶನಕ್ಕೆ ಇಂದಿನಿಂದ ಅವಕಾಶ ಕಲ್ಪಿಸಲಾಗಿದೆ. ಆರಂಭ ದಿನವಾದ ಇಂದು ಇಡೀ ಪ್ರದರ್ಶನಕ್ಕೆ ಬಂದ ನೋಡುಗರ ಚಿತ್ತ ಪ್ರೇಮಸೌಧದತ್ತ ನೆಟ್ಟಿತ್ತು. ಈ ಸುಂದರ ಮಹಲ್ ಕಂಡ ಬೆಂಗಳೂರಿಗರು ಖುಷಿಯಲ್ಲಿ ಸೆಲ್ಫಿ ಕ್ಲಿಕ್ಕಿಸೋದ್ರಲ್ಲಿ ಬಿಜಿಯಾಗಿದ್ರು.

ಈ ತಾಜ್‍ಮಹಲ್ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂ. ವೆಚ್ಛವಾಗಿದೆ. 150ಕ್ಕೂ ಹೆಚ್ಚು ಜನರು ಮೂರು ತಿಂಗಳ ಪರಿಶ್ರಮದಲ್ಲಿ ಈ ಸುಂದರ ಆಕೃತಿ ನಿರ್ಮಿಸಿದ್ದಾರೆ. ವಿಶೇಷ ಅಂದರೆ ಇದನ್ನ ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು ಇದೊಂಥರ ಪೋರ್ಟೆಬಲ್ ತಾಜ್‍ಮಹಲ್ ಅಂದರೆ ನೀವೂ ನಂಬಲೇಬೇಕು.

ಇಷ್ಟೆ ಅಲ್ಲದೆ ಇಲ್ಲಿ ಮಕ್ಕಳ ಜೊತೆ ಸೇರಿ ಇಡೀ ಕುಟುಂಬ ವಿಕೆಂಡ್‍ನಲ್ಲಿ ಎಂಜಾಯ್ ಮಾಡಬಹುದಾದ ಸಾಕಷ್ಟು ಮನೋರಂಜನೆ ಆಟಗಳಿವೆ. ಇಂದಿನಿಂದ ಆರಂಭವಾಗಿರೋ ಈ ಪ್ರದರ್ಶನ ಎರಡು ತಿಂಗಳು ಕಾಲ ಇರಲಿದೆ. ನೀವೂ ಕೂಡ ನಿಮಗೆ ಇಷ್ಟವಾದರ ಜೊತೆ ಪ್ರೇಮಸೌಧಕ್ಕೊಮ್ಮೆ ವಿಸಿಟ್ ಕೊಟ್ಟು ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬಹುದು.

Write A Comment