ಕರ್ನಾಟಕ

ಪುಣೆಯಲ್ಲಿ ಭಟ್ಕಳ ಮೂಲದ ಶಂಕಿತ ಉಗ್ರನ ಸೆರೆ

Pinterest LinkedIn Tumblr

arrested

ಪುಣೆ: ಇಸ್ಲಾಮಿಕ್ ಉಗ್ರ ಸಂಘಟನೆಗೆ ಸೇರಲು ಸಿರಿಯಾಗೆ ಹೊರಟ್ಟಿದ್ದ ಕರ್ನಾಟಕದ ಭಟ್ಕಳ ಮೂಲದ ರೌಫ್ ಅಹಮ್ಮದ್ ಎಂಬ ಶಂಕಿತ ಭಯೋತ್ಪಾದಕನನ್ನು ಪುಣೆ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ದುಬೈ ಮೂಲಕ ಸಿರಿಯಾಗೆ ತೆರಳು ಹೊರಟಿದ್ದಾಗ ಮುಂಬೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈತ ಸಿರಿಯಾ ಐಸಿಸ್ ಉಗ್ರರ ಜೊತೆ ಇಂಟರ್‍ನೇಟ್ ಮೂಲಕ ಚಾಟಿಂಗ್ ನಡೆಸುತ್ತಿದ್ದ. ಅಲ್ಲದೇ ಐಸಿಸ್ ಸಂಘಟನೆಗೆ ಸೇರಲು ಯುವಕರನ್ನು ಪ್ರೇರೆಪಿಸುತ್ತಿದ್ದ ಎನ್ನಲಾಗಿದೆ.

ಶಂಕಿತ ಉಗ್ರನು ಭಟ್ಕಳದ ನವಾಯತ್ ಕಾಲೋನಿಯವನು ಎನ್ನಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಕೇಂದ್ರ ಗ್ರಹ ಸಚಿವಾಲಯದಿಂದ ಈತನ ವಿರುದ್ಧ ಲುಕ್ ಔಟ್ ನೊಟೀಸ್ ಕೂಡ ಜಾರಿ ಮಾಡಿತ್ತು.

ಭಟ್ಕಳವೂ ಈಗಾಗಲೇ ಭಯೋತ್ಪಾದಕರ ಜೊತೆ ನಂಟಿದೆ ಎಂಬ ಆಪಾದನೆಗೆ ಗುರಿಯಾಗಿದೆ. ಈಗ ರೌಫ್ ಅಹಮ್ಮದ್ ಬಂಧನವಾಗಿರವುದರಿಂದ ಭಟ್ಕಳ ನಗರದಲ್ಲಿ ಇನ್ನೂ ಶಂಕಿತ ಉಗ್ರರಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

Write A Comment