ಕನ್ನಡ ವಾರ್ತೆಗಳು

ಸರಕಾರದ ಹೊಸ ನೀತಿಯಿಂದ ಫ್ಲೆಕ್ಸ್ ಉದ್ಯಮದಾರರ ಜೀವನ ದುಸ್ಥಿತಿ

Pinterest LinkedIn Tumblr

baner_felx_photo

ಮಂಗಳೂರು, ಏ.06: ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಮತ್ತು ಪ್ಲಾಸ್ಟಿಕ್ ಬಾವುಟಗಳನ್ನು ಬಂದ್ ಮಾಡುವಂತೆ ಸರಕಾರ ನೋಟಿಸ್ ಹೊರಡಿಸಿದ್ದು, ಫ್ಲೆಕ್ಸ್ ಉದ್ಯಮವನ್ನೇ ನಂಬಿಕೊಂಡಿರುವವ ಬದುಕು ಬೀದಿಗೆ ಬೀಳುವ ಸ್ಥಿತಿಯನ್ನು ತಲುಪಿದೆ. ಕಳೆದೊಂದು ದಶಕದಿಂದ ಪ್ರಚಾರದ ಭರಾಟೆಯನ್ನು ಹೆಚ್ಚಿಸುವಲ್ಲಿ ಫ್ಲೆಕ್ಸ್, ಬ್ಯಾನರ್ ಮಹತ್ವದ ಪಾತ್ರ ವಹಿಸಿದ್ದವು. ಇದನ್ನೇ ನಂಬಿಕೊಂಡು ಅದೆಷ್ಟೋ ಮಂದಿ ಹೊಸ ಘಟಕಗಳನ್ನು ಸ್ಥಾಪಿಸಿದ್ದರು. ಆದರೆ ಸರಕಾರದ ಹೊಸ ನೀತಿಯಿಂದಾಗಿ ಈ ಉದ್ಯಮಗಳು ಬಾಗಿಲು ಮುಚ್ಚುವ ಭೀತಿ ಎದುರಾಗಿದೆ.

ಫ್ಲೆಕ್ಸ್, ಬ್ಯಾನರ್ ಮುದ್ರಿಸದಂತೆ ನೋಟಿಸ್‌ನಲ್ಲಿ ಸೂಚನೆ ನೀಡಲಾಗಿದೆ. ಇದರಿಂದಾಗಿ ಪ್ರಚಾರದ ಭಾಗದಲ್ಲಿ ಮುಂಚಿಣಿಯಲ್ಲಿದ್ದ ಫ್ಲೆಕ್ಸ್, ಬ್ಯಾನರ್ ಅಳಿವಿನಂಚಿನತ್ತ ಸಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಫ್ಲೆಕ್ಸ್, ಬ್ಯಾನರ್ ಪ್ರಿಂಟ್ ಮಾಡುವ ಸಾವಿರಾರರು ಘಟಕಗಳು ಕಾರ್ಯಾಚರಿಸುತ್ತಿದ್ದು, ಇವುಗಳು ಬಾಗಿಲೆಳೆದುಕೊಳ್ಳಬೇಕಾಗಿ ಬಂದಿದೆ. ಈಗಾಗಲೇ ಮಹಾನಗರಗಳಲ್ಲಿ ಫ್ಲೆಕ್ಸ್, ಬ್ಯಾನರ್ ನಿಷೇಧಿಸಲಾಗಿದ್ದು, ಬ್ಯಾನರ್, ಕಟೌಟ್ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲು ಆದೇಶ ನೀಡಲಾಗಿದೆ.

Write A Comment