ಕರ್ನಾಟಕ

ಅಧ್ಯಕ್ಷ ಗಾದಿ; ಬಿಎಸ್ ವೈ ಮತ್ತೆ ಅಸಮಾಧಾನ, ದಿಢೀರ್ ದೆಹಲಿಗೆ ಪ್ರಯಾಣ

Pinterest LinkedIn Tumblr

bsyಬೆಂಗಳೂರು:ರಾಜ್ಯ ಭಾರತೀಯ ಜನತಾಪಕ್ಷದಲ್ಲಿ ಮತ್ತೆ ಅಸಮಾಧಾನ ಸ್ಫೋಟಗೊಂಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪ್ರಹ್ಲಾದ್ ಜೋಷಿ ಅವರನ್ನು ಮತ್ತೆ 3 ತಿಂಗಳು ಮುಂದುವರಿಕೆಗೆ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್ ವೈ ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿರುವುದಾಗಿ ಮೂಲಗಳು ತಿಳಿಸಿವೆ.

ಶುಕ್ರವಾರ ರಾಜ್ಯ ಬಿಜೆಪಿ ಕಾರ್ಯಕಾರಿಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡಿದ್ದಾರೆ. ಕಾರ್ಯಕಾರಿಣಿಯಲ್ಲಿ ಎಸಿಬಿ ರಚನೆ, ವಕ್ಫ್ ಮಂಡಳಿ ಆಸ್ತಿ ಕಬಳಿಕೆ ವಿಚಾರ ಸೇರಿದಂತೆ ಹಲವಾರು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು ಎಂದು ಹೇಳಿವೆ.

ಏತನ್ಮಧ್ಯೆ ಜೂನ್ ಬಳಿಕವಷ್ಟೇ ರಾಜ್ಯಾಧ್ಯಕ್ಷರ ಆಯ್ಕೆ ಸಾಧ್ಯತೆ ಮತ್ತು ಜೋಷಿ ಅವರ ಅಧಿಕಾರವಧಿಯನ್ನು 3 ತಿಂಗಳ ಕಾಲ ಮುಂದುವರಿಸಿರುವ ರಾಜ್ಯ ನಾಯಕರ ಏಕಪಕ್ಷೀಯ ನಿರ್ಧಾರದ ಬಗ್ಗೆ ಬಿಜೆಪಿ ಮುಖಂಡ ಬಿಎಸ್ ಯಡಿಯೂರಪ್ಪ ಅಸಮಾಧಾನ ಹೊರಹಾಕಿದ್ದಾರೆ ಎಂದು ಮೂಲಗಳು ವಿವರಿಸಿವೆ.

ರಾಜ್ಯ ಕಾರ್ಯಕಾರಿಣಿಯ ಸಂದರ್ಭದಲ್ಲೇ ಬಿಎಸ್ ಯಡಿಯೂರಪ್ಪ ಸಾಂಬಾರಾ ಮಂಡಳಿ ಸಭೆಗೆ ಹಾಜರಾಗಬೇಕೆಂಬ ನೆಪದಲ್ಲಿ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಹಾಗಾಗಿ ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಗಾದಿಗಾಗಿ ಮತ್ತೆ ಜಂಗೀಕುಸ್ತಿ ಆರಂಭವಾದಂತಾಗಿದೆ.
-ಉದಯವಾಣಿ

Write A Comment