ಮನೋರಂಜನೆ

ಡಿಜೆ ಯಶ್‌ರ ಆಡಿಯೋ ಲೈಫ್ಗೆ ರಘು, ವೇಲು ರಾಯಭಾರಿಗಳು

Pinterest LinkedIn Tumblr

raghuಪ್ರವೀಣ್‌ ಡಿ ರಾವ್‌ ಅವರಿಂದ ಶುರುವಾಗಿದ್ದ ಆಡಿಯೋ ಲೈಫ್ ಎಂಬ ಸೌಂಡ್‌ ಇಂಜಿನಿಯರಿಂಗ್‌ ಕಾಲೇಜ್‌ ಈಗ ನಾಲ್ಕು ವರ್ಷ ಮುಗಿಸಿದೆ. ಈ ನಾಲ್ಕು ವರ್ಷದಲ್ಲಿ ಈ ಕಾಲೇಜ್‌ನಿಂದ ಸಾಕಷ್ಟು ಹುಡುಗರು ಕಲಿತು ಹೊರಬಿದ್ದಿದ್ದಾರೆ. ಈಗ ಒಂದು ವರ್ಷದ ಡಿಪ್ಲೋಮಾ ತರಗತಿಗಳನ್ನು ಶುರು ಮಾಡಬೇಕೆಂದು ಹೊರಟಿದ್ದಾರೆ ಕಾಲೇಜು ನಡೆಸುತ್ತಿರುವ ಡಿಜೆ ಯಶ್‌ ಹಾಗೂ ಅವರ ತಂದೆ ಎನ್‌. ಶಿವಪ್ರಕಾಶ್‌. ಅಷ್ಟೇ ಅಲ್ಲ, ಈ ಕಾಲೇಜಿನ ರಾಯಭಾರಿಗಳಾಗಿ ರಘು ದೀಕ್ಷಿತ್‌ ಮತ್ತು ಲಹರಿ ವೇಲು ಅವರನ್ನು ತಮ್ಮ ಜೊತೆಗೆ ಸೇರಿಸಿಕೊಂಡಿದ್ದಾರೆ.

ಕಾಲೇಜಿನ ಮತ್ತು ಅದಕ್ಕೆ ರಾಯಭಾರಿಯಾದವರ ಬಗ್ಗೆ ಹೇಳುವುದಕ್ಕೆ ಜೆ.ಪಿ.ನಗರದ ತಮ್ಮ ಸ್ಟುಡಿಯೋಗೆ ಪತ್ರಕರ್ತರನ್ನು ಕರೆದಿದ್ದರು ಯಶ್‌ ಮತ್ತು ಶಿವಪ್ರಕಾಶ್‌. ತಮ್ಮ ಕಾಲೇಜಿನ ಬಗ್ಗೆ ಪರಿಚಯ ಮಾಡಿಕೊಡುತ್ತಾ, “ಸದ್ಯಕ್ಕೆ ನಮ್ಮ ಕಾಲೇಜಿನಲ್ಲಿ ಸಿನಿಮಾ ಸೌಂಡ್‌, ಸಂಗೀತ ಸಂಯೋಜನೆ, ಹಿನ್ನೆಲೆ ಸಂಗೀತ, ರೆಕಾರ್ಡಿಂಗ್‌ ತಂತ್ರಜ್ಞಾನ, ಸಂಕಲನ, ಮಿಕ್ಸಿಂಗ್‌, ರೇಡಿಯೋ ಬ್ರಾಡ್‌ಕಾÂಸ್ಟಿಂಗ್‌ ಸೇರಿದಂತೆ ಹಲವು ವಿಷಯಗಳು ಕುರಿತು ತರಬೇತಿಯನ್ನು ನೀಡಲಾಗುತ್ತಿದೆ. ಈಗ ಇವೆಲ್ಲವನ್ನೂ ಸೇರಿಸಿ ಒಂದು ವರ್ಷದ ಡಿಪ್ಲೋಮಾ ಕೋರ್ಸ್‌ ಶುರು ಮಾಡಿದ್ದೇವೆ. ಈ ಕೋರ್ಸ್‌ ಕಲಿತವರಿಗೆ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಗುರುತಿಸಿಕೊ‌ಳ್ಳುವುದಕ್ಕೆ ಸುಲಣವಾಗುತ್ತದೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ರಘು ದೀಕ್ಷಿತ್‌ ಅವರು ಒಬ್ಬೊಬ್ಬ ವಿದ್ಯಾರ್ಥಿಯನ್ನೇ ಮಾನಿಟರ್‌ ಮಾಡಿ, ತಮ್ಮ ಸ್ಟುಡಿಯೋದಲ್ಲಿ ಇಂಟರ್ನಿ ಆಗಿ ಕೆಲಸ ಮಾಡುವುದಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಒಪ್ಪಿಕೊಂಡಿದ್ದಾರೆ’ ಎಂದರು. ಈ ಕಾಲೇಜಿನಲ್ಲಿ ಸಿನಿಮಾ ಸಂಗೀತದ ಬಗ್ಗೆ ತರಬೇತಿ ಕೊಡುವುದಷ್ಟೇ ಅಲ್ಲ, ಡಿಸ್ಕ್ ಜಾಕಿಯಿಂಗ್‌ನಲ್ಲಿ ಕಡಿಮೆ ಅವಧಿಯ ಕೋರ್ಸುಗಳಿವೆಯಂತೆ.

ರಘು ದೀಕ್ಷಿತ್‌ ಮಾತನಾಡಿ, ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತಮ್ಮ ಸ್ಟುಡಿಯೋದಲ್ಲಿ ಇಂಟರ್ನಿ ಆಗಿ ಕಲಿಯುವ ಅವಕಾಶವಿದೆಯೆಂದು ಮತ್ತು ಇದರಿಂದ ಸಂಗೀತ ಮತ್ತು ಸಿನಿಮಾ ಸಂಗೀತ ಕ್ಷೇತ್ರದಲ್ಲಿ ನೈಜ ಅನುಭವ ಸಿಗುವುದೆಂದರು. ಇನ್ನು ಲಹರಿ ವೇಲು, ಚಿತ್ರರಂಗ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುವುದಾಗಿ ಹೇಳಿಕೊಂಡರು.
-ಉದಯವಾಣಿ

Write A Comment