ಕರ್ನಾಟಕ

40 ಸಿಬ್ಬಂದಿ ಸಸ್ಪೆಂಡ್; ಏಪ್ರಿಲ್ 12ಕ್ಕೆ ಮರುಪರೀಕ್ಷೆ

Pinterest LinkedIn Tumblr

Kimmane_Rathnakar_Thirthahalli_0

ಬೆಂಗಳೂರು: ‌ದ್ವಿತೀಯ ಪಿಯುಸಿ ರಸಾಯನ ವಿಜ್ಞಾನ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ಪರೀಕ್ಷೆಯನ್ನು ಏಪ್ರಿಲ್ 12ರಂದು ನಡೆಸಲು ನಿರ್ಧರಿಸಲಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಹೇಳಿಕೆ ನೀಡಿದರು.

‘ಘಟನೆ ಸಂಬಂಧ ಪಿ ಯು ಪರೀಕ್ಷಾ ವಿಭಾಗದ 40 ಸಿಬ್ಬಂದಿಯನ್ನು ಅಮಾನತಿಗೆ ಆದೇಶಿಸಲಾಗಿದೆ. ಮರು ಪರೀಕ್ಷೆಯನ್ನು ಏಪ್ರಿಲ್ 12ರಂದು ನಡೆಸಲಾಗುವುದು. ಮರುಪರೀಕ್ಷೆಯ ಮೇಲುಸ್ತುವಾರಿಯನ್ನು ಪ್ರಸಕ್ತ ಸಾರಿಗೆ ಆಯುಕ್ತ ರಾಮೇಗೌಡ ಅವರು ನೋಡಿಕೊಳ್ಳಲಿದ್ದಾರೆ. ಹಿಂದಿನ ಪದವಿ ಪೂರ್ವ ಇಲಾಖೆಯ ಆಯುಕ್ತರು ಒಳಗೊಂಡಂತೆ ಮೂವರು ಹಿರಿಯ ಅಧಿಕಾರಗಳ ವೀಕ್ಷಕರ ತಂಡವನ್ನು ಸರ್ವಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕ ಡಾ.ಪಿ.ಸಿ.ಜಾಫರ್ ಅವರ ನೇತೃತ್ವದಲ್ಲಿ ರಚಿಸಲಾಗುವುದು’ ಎಂದರು.

Write A Comment