ಕರ್ನಾಟಕ

ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆ: ರಾಜ್ಯದ ಹಲವೆಡೆ ಪ್ರತಿಭಟನೆ

Pinterest LinkedIn Tumblr

2121

ಬೆಂಗಳೂರು: ಗುರುವಾರ ನಡೆಯಬೇಕಿದ್ದ ‌ದ್ವಿತೀಯ ಪಿಯು ರಸಾಯನ ವಿಜ್ಞಾನ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಿರುವ ಸರ್ಕಾರ ಕ್ರಮ ಖಂಡಿಸಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ.

ಬೆಂಗಳೂರು: ಮಲ್ಲೇಶ್ವರದಲ್ಲಿರುವ ಪಿ ಯು ಮಂಡಳಿಯ ಕಚೇರಿಯ ಎದುರು ವಿದ್ಯಾರ್ಥಿಗಳು, ಅವರ ಪೋಷಕರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ.

ವಿದ್ಯಾರ್ಥಿಗಳೊಟ್ಟಿಗೆ ಎಬಿವಿಪಿ, ಎನ್‌ಎಸ್‌ಯುಐ, ಎಸ್‌ಐಒ ಸಂಘಟನೆಗಳೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ.

ಧಾರವಾಡ: ದ್ವಿತೀಯ ಪಿಯು ರಸಾಯನ ವಿಜ್ಞಾನ ಪರೀಕ್ಷೆ ಮತ್ತೆ ಮುಂದೂಡಿದಕ್ಕೆ ವಿದ್ಯಾರ್ಥಿಗಳು ಪಿಯು ಮಂಡಳಿ ಹಾಗೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ: ಪರೀಕ್ಷೆ ಮುಂದೂಡಿದ್ದನ್ನು ಖಂಡಿಸಿ ನಗರದ ಗಾ೦ಧಿಚೌಕ್‌ದಲ್ಲಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದ್ದಾರೆ.

ಮೈಸೂರು: ಪರೀಕ್ಷೆ ಮುಂದೂಡಿಕೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಆಕ್ರೋಶ ಹಿಂಸಾಸ್ವರೂಪ ತಳೆದಿದ್ದು, ಲಾಠಿ ಪ್ರಹಾರ ಮಾಡಲಾಗಿದೆ. ಬಸ್ಸಿಗೆ ಕಲ್ಲು ತೂರಿದ ಘಟನೆ ವರದಿಯಾಗಿದೆ.

ಬಾಗಲಕೋಟೆ: ದ್ವಿತೀಯ ಪಿಯುಸಿ ಮರು ಪರೀಕ್ಷೆ ರದ್ದಾಗಿರುವುದನ್ನು ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಗದಗ/ಹಾವೇರಿ: ಗದಗದಲ್ಲಿ ದ್ವಿತೀಯ ಪಿಯು ರಸಾಯನ ವಿಜ್ನಾನ ಪರೀಕ್ಷೆ ಮುಂದೂಡಿದ್ದಕ್ಕೆ ಕೆವಿಎಸ್ ಆರ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ನಡೆಸಿದರು. ಹಾವೇರಿಯಲ್ಲಿ ವಿದ್ಯಾರ್ಥಿಗಳು ಪಿಯು ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಕಾರವಾರ: ಪರೀಕ್ಷೆ ಮುಂದೂಡಿಕೆ ಖಂಡಿಸಿದ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು, ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಶಿರಸಿ: ಪರೀಕ್ಷೆ ರದ್ದು ಕ್ರಮ ವಿರೋಧಿಸಿ ಶಿರಸಿಯಲ್ಲಿ ಪದವೀಧರರ ವೇದಿಕೆ ವತಿಯಿಂದ ಉಪವಿಭಾಗಾಧೀಕಾರಿಗೆ ಮನವಿ ಪತ್ರ ಸಲ್ಲಿಕೆ.

ಬಳ್ಳಾರಿ: ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಬಳ್ಳಾರಿಯಲ್ಲಿ ಅಲ್ಲಂಸುಮಂಗಲಮ್ಮ ಮಹಿಳಾ ಕಾಲೇಜು ಮುಂಭಾಗ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ಐನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಪೋಷಕರು ಭಾಗಿಯಾಗಿದ್ದರು. ನಗರದ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಎಐಡಿಎಸ್ಒ ಸಂಘಟನೆ ಸದಸ್ಯರು ಧರಣಿ ನಡೆಸಿದರು.

ಹೊಸಪೇಟೆ: ಸರ್ಕಾರದ ಕ್ರಮವನ್ನು ಟೀಕಿಸಿರುವ ಎಬಿವಿಪಿ ಸಂಘಟನೆ, ಬೀದಿಗಿಳಿದು ಪ್ರತಿಭಟನೆ ನಡೆಸಿತು.

Write A Comment