ಅಂತರಾಷ್ಟ್ರೀಯ

ಏರೋಪ್ಲೇನ್ ನಲ್ಲಿ ಯೋಗ, ಧ್ಯಾನ ಮಾಡಲು ಹೋಗಿ ಎಫ್ ಬಿ ಐ ಅತಿಥಿಯಾದ ಪ್ರಯಾಣಿಕ

Pinterest LinkedIn Tumblr

United-Airlines

ಹಾನಲುಲು: ತನ್ನ ಆಸನದಲ್ಲಿ ಕೂರುವ ಬದಲಾಗಿ ವಿಮಾನದಲ್ಲಿ ಕುಳಿತು ಯೋಗ ಮತ್ತು ಧ್ಯಾನ ಮಾಡಬೇಕೆಂದು ಹಠ ಹಿಡಿದ ದಕ್ಷಿಣ ಕೊರಿಯಾದ ಪ್ರಯಾಣಿಕನಿಂದ ಜಪಾನ್ ಗೆ ಹೊರಟಿದ್ದ ವಿಮಾನ ಹವಾಯಿಗೆ ಹಿಂದಿರುಗಬೇಕಾಯಿತು ಎಂದು ಅಮೇರಿಕಾ ತನಿಕಾ ದಳ ಎಫ್ ಬಿ ಐ ತಿಳಿಸಿದೆ.

ಹಾನಲುಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜಪಾನಿನ ನಾರಿತಾ ಅಂತರಾಷ್ಟ್ರೀಯ ವಿಮಾನ ನಿಲಾಣಕ್ಕೆ ಹೊರಟಿದ್ದ ಯುನೈಟೆಡ್ ಏರ್ಲೈನ್ಸ್ ನಲ್ಲಿ, ಹ್ಯೋಂಗಟೆ ಪಯೆ ಎಂಬ ಪ್ರಯಾಣಿಕ ವಿಮಾನ ಸಿಬ್ಬಂದಿಯ ಮೇಲೆ ಕೂಗಾಡುತ್ತಿದ್ದಿದ್ದನ್ನು ಕೇಳಿ ವಿಮಾನ ಚಾಲಕ ವಿಮಾನವನ್ನು ಹಿಂದಕ್ಕೆ ತಿರುಗಿಸಿದ್ದಾರೆ ಎಂದು ಪ್ರಯಾಣಿಕನ ವಿರುದ್ದ ಕ್ರಿಮಿನಲ್ ಅಪರಾಧ ದಾಖಲಿಸಿರುವ ಎಫ್ ಬಿ ಐ ತಿಳಿಸಿದೆ.

ಊಟ ನೀಡುತ್ತಿದ್ದ ಸಮಯದಲ್ಲಿ ತಮ್ಮ ಆಸನಲ್ಲಿ ಕೂರದೆ ಯೋಗ ಮತ್ತು ಧ್ಯಾನ ಮಾಡಲು ಹೊರಟಿದ್ದ ಪಯೆ ಅವರನ್ನು ಪಡೆದ ಪತ್ನಿ ಮತ್ತು ವಿಮಾನ ಸಿಬ್ಬಂದಿ ಆಸನಕ್ಕೆ ಹಿಂದಿರುಗುವಂತೆ ಸೂಚಿಸಿದಾಗ ಕೋಪಗೊಂಡು ತಮ್ಮ ಪತ್ನಿಯನ್ನು ಪಕ್ಕಕ್ಕೆ ತಳ್ಳಿ ವಿಮಾನ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ. “ತನ್ನ ಪತ್ನಿ ತಮ್ಮನ್ನು ತಡೆದಿದ್ದಕ್ಕೆ, ಮತ್ತು ವಿಮಾನ ಸಿಬ್ಬಂದಿಯ ಪರವಹಿಸಿದ್ದಕ್ಕೆ ಕೋಪಗೊಂದ ಪಯೆ ಅವರನ್ನು ಪಕ್ಕಕ್ಕೆ ತಳ್ಳಿದ್ದಾರೆ” ಎಂದು ಎಫ್ ಬಿ ಐ ತಿಳಿಸಿದೆ.

ಅಲ್ಲದೆ ಅವರನ್ನು ಹಿಂದಕ್ಕೆ ಕರೆದ ಪ್ರಯಾಣಿಕರಿಗೆ ತಲೆಯಿಂದ ಗುದ್ದಲು ಮತ್ತು ಕಚ್ಚಲು ಪ್ರಯತ್ನಿಸಿದ್ದಾರೆ ಎಂದು ಅಮೇರಿಕಾ ಸಹ ಅಟಾರ್ನಿ ಡ್ಯಾರೆನ್ ಚಿಂಗ್, ಪಯೆ ವಶದ ವಿಚಾರಣೆ ವೇಳೆಯಲ್ಲಿ ಹೇಳಿದ್ದಾರೆ.

೨೫೦೦೦ ಯು ಎಸ್ ಡಾಲರ್ ಜಾಮೀನು ಪಡೆದು, ಒಆಹ ದ್ವೀಪವನ್ನು ತೊರೆಯದಂತೆ ಮತ್ತು ಮಾನಸಿಕ ಪರೀಕ್ಷೆಗೆ ಒಳಗಾಗುವಂತೆ ನಿಯಮಗಳನ್ನು ಹಾಕಿ ಪಯೆ ಅವರಿಗೆ ಅಮೇರಿಕಾ ಮೆಜೆಸ್ಟ್ರೆಟ್ ನ್ಯಾಯಾಧೀಶ ಕೆವಿನ್ ಚ್ಯಾಂಗ್ ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಪಯೆ ಅವರಿಗೆ ಕೊರಿಯಾಗೆ ಹಿಂದಿರುಗಲು ಅವಕಾಶ ಕೋರಿ ಅವರ ಪರ ವಕೀಲ ಕಿಮ್ ಮನವಿ ಮಾಡಿದ್ದರೂ, ಅದಕ್ಕಾಗಿ ಮತ್ತೆ ವಿಮಾನ ಹತ್ತಬೇಕಾಗಿರುವುದರಿಂದ ನ್ಯಾಯಾಧೀಶ ಅನುಮತಿ ನಿರಾಕರಿಸಿದ್ದಾರೆ.

ಕೋರ್ಟ್ ಹೊರಗೆ ಮಾತನಾಡಿದ ೭೨ ವರ್ಷದ ಮಾಜಿ ಕೃಷಿಕ ಪಯೆ ಪರ ವಕೀಲ ಕಿಮ್, ತಮ್ಮ ಕಕ್ಷಿದಾರ ೪೦ನೆ ಮದುವೆ ವಾರ್ಷಿಕೋತ್ಸವಕ್ಕೆ ಹವಾಯಿಗೆ ಪತ್ನಿಯೊಂದಿಗೆ ಬಂದಿದ್ದರು. ಇದು ಹವಾಯಿಗೆ ಅವರ ಮೊದಲ ಪ್ರವಾಸವಾಗಿತ್ತು ಎಂದಿದ್ದಾರೆ.

ಪಯೆ ಉದ್ವಿಘ್ನತೆ ಕಳೆದುಕೊಳ್ಳಲು ಇತ್ತೀಚೆಗಷ್ಟೇ ಯೋಗ ಕಲಿತಿದ್ದರು. ಅಲ್ಲದೆ ಈ ಪ್ರವಾಸದ ವೇಳೆ ಅವರು ನಿದ್ರಾಹೀನರಾಗಿದ್ದರು ಎಂದು ಕಿಮ್ ಹೇಳಿದ್ದರೆ. ೧೧ ದಿನಗಳಿಂದ ಕಿಮ್ ಅವರಿಗೆ ನಿದ್ದೆ ಮಾಡಲಾಗಿಲ್ಲ ಎಂದು ಪಯೆ ಎಫ್ ಬಿ ಐ ಗೆ ತಿಳಿಸಿದ್ದಾರಂತೆ.

Write A Comment