ಕರ್ನಾಟಕ

ರಾಜಧಾನಿಯಲ್ಲಿ ಮತ್ತೆ ಆಫ್ರಿಕನ್ ವಿದ್ಯಾರ್ಥಿಗಳ ಪುಂಡಾಟ

Pinterest LinkedIn Tumblr

beat

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಆಫ್ರಿಕನ್ ವಿದ್ಯಾರ್ಥಿಗಳ ಪುಂಡಾಟ ಮುಂದುವರೆದಿದೆ. ನಿನ್ನೆ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಮನೆ ಮಾಲೀಕನ ಮೇಲೆ ಹಲ್ಲೆ ಮಾಡಿದ್ದಾರೆ.

ಬಾಣಸವಾಡಿಯ ಕುಳ್ಳಪ್ಪ ಸರ್ಕಲ್ ನಿವಾಸಿ ಕಾರ್ತಿಕ್ ಮೇಲೆ ಹಲ್ಲೆ ಮಾಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಒಂದೂವರೆ ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದ ಕಾಂಗೋ ದೇಶದ ಎರೀನ್ ಮತ್ತು ರಂಜಾನಿ ಮೊದಲು ಇಬ್ಬರಿಗಾಗಿ ಬಾಡಿಗೆ ಪಡೆದಿದ್ದರು. ಆದರೆ ಇತ್ತೀಚೆಗೆ 7-8 ಮಂದಿ ವಾಸವಿದ್ದರು. ಅಲ್ಲದೇ ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದರು.

ನಿನ್ನೆ ರಾತ್ರಿ 11 ಗಂಟೆಯ ವೇಳೆ ಗಲಾಟೆ ಮಾಡುತ್ತಿದ್ದಾಗ ಮನೆ ಮಾಲೀಕ ಕಾರ್ತಿಕ್ ಪ್ರಶ್ನಿಸಿದ್ದಕ್ಕೆ ಜತೆಯಾದ ಸ್ನೇಹಿತರು ಸೇರಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯರು ಸಹಾಯಕ್ಕೆ ಬಂದಾಗ ಪರಾರಿಯಾಗಲು ಯತ್ನಿಸಿದ್ದಾರೆ.

ಈ ವೇಳೆ ಸ್ಥಳೀಯರು ಆಫ್ರಿಕನ್ ವಿದ್ಯಾರ್ಥಿಗಳ ಕಾರಿಗೆ ಕಲ್ಲು ತೂರಿದ್ದಾರೆ. ಜತೆಗೆ ಹಲ್ಲೆ ಮಾಡಿದ ವಿದ್ಯಾರ್ಥಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಈ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Write A Comment