ಕರ್ನಾಟಕ

ಸಂಪುಟ ಪುನಾರಚನೆ ಆಗದಿದ್ದರೆ ಕಾಂಗ್ರೆಸ್ ಗೋತಾ: ಗುತ್ತೇದಾರ್ ಭವಿಷ್ಯ

Pinterest LinkedIn Tumblr

malikayyaguttedar

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಪುನಾರಚನೆ ಮಾಡದಿದ್ರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಿಲ್ಲ ಎಂದು ಶಾಸಕ ಮಾಲೀಕಯ್ಯ ಗುತ್ತೆದಾರ್ ಅವರು ಹೇಳಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಬಳಿಕ ಸಂಪುಟ ಪುನಾರಚನೆ ಮಾಡುವುದಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಹೇಳಿದ್ದಾರೆ. ಏಪ್ರಿಲ್ 10 ರಂದು ಸಿಎಂ ದೆಹಲಿಗೆ ತೆರಳುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಸಂಪುಟದಲ್ಲಿರುವ ಹಿರಿಯರಿಗೆ ಪಕ್ಷದ ಕೆಲಸ ವಹಿಸಬೇಕು. ಸಮರ್ಥ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ಪಕ್ಷ ಬಲಗೊಳ್ಳಬೇಕಾದ್ರೆ ಸಂಪುಟ ಪುನಾರಚನೆ ಅನಿವಾರ್ಯ. ಸಂಪುಟ ಪುನಾರಚನೆ ಆದ್ರೆ ಮುಖ್ಯಮಂತ್ರಿಗಳು ಪಕ್ಷದ ಕೈ ಬಲಪಡಿಸಬಹುದು. ಇಲ್ಲಾ ಅಂದ್ರೆ ಪಕ್ಷ ಹಾಳಾಗುತ್ತೆ. ಮುಂದೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ ಅಂತ ಗುತ್ತೆದಾರ್ ಹೇಳಿದರು.

Write A Comment