ಕರ್ನಾಟಕ

ವ್ಯಾಪಾರಿ ಕಣ್ಣಿಗೆ ಖಾರದಪುಡಿ ಎರಚಿ ಸುಲಿಗೆ

Pinterest LinkedIn Tumblr

attack

ಬೆಂಗಳೂರು: ಅಂಗಡಿ ಬಾಗಿಲು ಮುಚ್ಚಿಕೊಂಡು ಹೋಗುತ್ತಿದ್ದ ಒಣ ಹಣ್ಣುಗಳ ವ್ಯಾಪಾರಿಯೊಬ್ಬರನ್ನು ಅಡ್ಡಗಟ್ಟಿ ಕಣ್ಣಿಗೆ ಖಾರದ ಪುಡಿ ಎರಚಿ ಎರಡೂವರೆ ಲಕ್ಷ ರೂಗಳನ್ನು ಮೂವರು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ದುರ್ಘಟನೆ ಯಶವಂತಪುರ ಆರ್‌ಎಂಸಿ ಯಾರ್ಡ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.

ಆರ್‌ಎಂಸಿ ಯಾರ್ಡ್‌ನಲ್ಲಿರುವ ಸಾತ್ವಿಕ್ ಡ್ರೈ ಪ್ರೂಟ್ಸ್ ಕಂಪನಿಯ ಮಾಲೀಕ ರಘುಬೀರ್ ರಾಮ್ ಅವರು ರಾತ್ರಿ ೧೦.೩೦ರಲ್ಲಿ ಅಂಗಡಿಗೆ ಬೀಗ ಹಾಕಿಕೊಂಡು ಮನೆಗೆ ಹೋಗಲು ಮುಂದಾಗುತ್ತಿರುವಾಗ ಹೊಂಡಾ ಆಕ್ಟಿವಾ ಸ್ಕೂಟರ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ.

ಎಕಾಏಕಿ ರಘುಬೀರ್‌ರಾಮ್ ಅವರ ಕಣ್ಣಿಗೆ ಖಾರದಪುಡಿ ಎರಚಿ ಅವರ ಬಳಿಯಿದ್ದ ಎರಡೂವರೆ ಲಕ್ಷ ರೂಗಳಿದ್ದ ಬ್ಯಾಗ್‌ನ್ನು ಕಸಿದು ಪರಾರಿಯಾಗಿದ್ದಾರೆ ಪ್ರಕರಣ ದಾಖಲಿಸಿಕೊಂಡಿರುವ ಆರ್‌ಎಂಸಿ ಯಾರ್ಡ್ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

Write A Comment