ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಮೂರನೇ ಆವೃತ್ತಿ ಪಿನಾಲೆ ಮುಗಿದು ಸುಮಾರು ದಿನಗಳೇ ಕಳೆದು ಹೋಗಿದೆ. ಆದರೆ ಇದೀಗ ಮತ್ತೆ ಬಿಗ್ ಬಾಸ್ ಮನೆ ಸುದ್ದಿಯಲ್ಲಿದೆ.
ಬಿಡದಿಯ ಇನೋವೇಟಿವ್ ಪಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ನಿರ್ಮಿಸಿದ ಬಿಗ್ ಬಾಸ್ ಮನೆಯ ನೋಡುವ ಅವಕಾಶವನ್ನು ಸಾರ್ವಜನಿಕರಿಗೆ ಕಲ್ಪಿಸಲಾಗಿದೆ. ಇಷ್ಟು ದಿನ ಟಿವಿಯಲ್ಲಿ ಮಾತ್ರ ಬಿಗ್ ಬಾಸ್ ಮನೆ ನೋಡಿ ಖುಷಿಪಡುತ್ತಿದ್ದ ಸಾರ್ವಜನಿಕರಿಗೆ ಇದೀಗ ನೆರವಾಗಿ ನೋಡುವ ಭಾಗ್ಯ ದೊರೆತ್ತಿದೆ.
ಪ್ರತಿದಿನ ಬೆಳಿಗ್ಗೆ ೧೦ ರಿಂದ ಸಂಜೆ ೬ರವರೆಗೂ ಬಿಗ್ ಬಾಸ್ ಮನೆಗೆ ಪ್ರವೇಶವಿದೆ. ನಿಮ್ಮ ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಬಿಗ್ ಬಾಸ್ ಮನೆಗೆ ಭೇಟಿ ನೀಡಿ ಸೆಲೆಬ್ರೆಟಿಗಳಗಳು ಆಟವಾಡಿದ ಜಾಗ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕಿಚ್ಚು ಹಬ್ಬಿಸಿದ ವೇದಿಕೆಯನ್ನು ಕಂಡು ಮಸ್ತು ಮಜಾ ಮಾಡಿ ಪೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಬಹುದು.