ಕರ್ನಾಟಕ

‘ಜಗ್ಗು ದಾದಾ’ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣಕ್ಕಾಗಿಯೇ1.25 ಕೋಟಿ ರೂ….!

Pinterest LinkedIn Tumblr

jaggu-dada

ಬೆಂಗಳೂರು: ದರ್ಶನ್ ಅವರ ಮುಂದಿನ ಚಿತ್ರ ‘ಜಗ್ಗು ದಾದಾ’ ಕ್ಲೈಮ್ಯಾಕ್ಸ್ ಗೆ ಈಗಲ್ಟನ್ ನಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಸಿನೆಮಾದ ನಿರ್ಮಾಪಕ-ನಿರ್ದೇಶಕ ರಾಘವೇಂದ್ರ ಹೆಗಡೆಯವರ ಪ್ರಕಾರ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣಕ್ಕಾಗಿಯೇ1.25 ಕೋಟಿ ರೂ ವ್ಯಯಿಸುತ್ತಿದ್ದಾರಂತೆ. ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿ ಇಡೀ ಚಿತ್ರತಂಡ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಗಾಲ್ಫ್ ರೆಸಾರ್ಟ್ ನಲ್ಲಿ ಬೀಡುಬಿಟ್ಟಿದೆ.

“ಕ್ಲೈಮ್ಯಾಕ್ಸ್ ಹಾಸ್ಯಮಯವಾಗಿರುತ್ತದೆ” ಎನ್ನುತ್ತಾರೆ ಹೆಗಡೆ. ರೊಮ್ಯಾಂಟಿಕ್ ಕಾಮಿಡಿ ಚಿತ್ರ ಇದು ಎನ್ನುವ ನಿರ್ದೇಶಕ ಕ್ಲೈಮ್ಯಾಕ್ಸ್ ಚಿತ್ರೀಕರ್ಣಕ್ಕಾಗಿ ಹಾಕಿರುವ ಸೆಟ್ ವೆಚ್ಚವೇ ೩೦ ಲಕ್ಷ ಎಂದಿದ್ದಾರೆ. ರೆಸಾರ್ಟ್ ಬಾಡಿಗೆ ದಿನಕ್ಕೆ ೨ ಲಕ್ಷ ಇದ್ದು ಏಳು ದಿನಗಳ ಚಿತ್ರೀಕರಣ ನಡೆಸಲಿದ್ದಾರಂತೆ. “ಕ್ಲೈಮ್ಯಾಕ್ಸ್ ಆಕ್ಷನ್ ದೃಶ್ಯಗಳನು ನಿರ್ದೇಶಿಸಲು ನಾವು ಸ್ಟಂಟ್ ಮಾಸ್ಟರ್ ಮಾಫಿಯಾ ಶಶಿ ಅವರನ್ನು ಆಯ್ಕೆ ಮಾಡಿದ್ದೇವೆ. ಅವರು ಸಾಮಾನ್ಯವಾಗಿ ಪ್ರಿಯದರ್ಶನ್ ಅವರ ಎಲ್ಲ ಸಿನೆಮಾಗಳ ಭಾಗವಾಗಿರುತ್ತಾರೆ. ಶಶಿ ಅವರು ೩೦ ಜನ ಫೈಟ್ ಮಾಸ್ಟರ್ ಗಳನ್ನು ಕರೆತಂದಿದ್ದಾರೆ. ಏಳು ದಿನಗಳಿಗೆ ೫೦೦ ಜನ ಕಿರಿಯ ಕಲಾವಿದರನ್ನು ಆಯ್ಕೆ ಮಾಡಿದ್ದೇವೆ. ಇವೆಲ್ಲದ್ದಕ್ಕೂ ಒಟ್ಟು ೧.೨೫ ಕೋಟಿ ವೆಚ್ಚವಾಗುತ್ತಿದೆ” ಎಂದಿದ್ದಾರೆ ನಿರ್ದೇಶಕ. ಭಾನುವಾರ ಕ್ಲೈಮ್ಯಾಕ್ಸ್ ಚಿತ್ರೀಕರಣ ಮುಗಿಸಿ ಉಳಿದೆರಡು ಹಾಡುಗಳ ಚಿತ್ರೀಕರಣಕ್ಕೆ ಇಟಲಿಗೆ ತೆರಳಲಿದೆಯಂತೆ.

ಏಪ್ರಿಲ್ ೫ ಕ್ಕೆ ಹಿಂದಿರುಗಿ ಯಾವುದೇ ವಿರಾಮವಿಲ್ಲದಂತೆ ಉಳಿದ ಚಿತ್ರೀಕರಣವನ್ನು ಮಾಡಿ ಮುಗಿಸಲಿದೆಯಂತೆ ಚಿತ್ರತಂಡ. “ಏಪ್ರಿಲ್ ೧೦ರ ಹೊತ್ತಿಗೆ ಚಿತ್ರೀಕರಣವನ್ನು ಸಂಪೂರ್ಣಗೊಳಿಸುವ ಇರಾದೆಯಿದೆ. ನಂತರ ಡಬ್ಬಿಂಗ್-ಎಡಿಟಿಂಗ್ ಕೆಲಸಗಳು ನಡೆಯಲಿವೆ, ಮೇ ಹೊತ್ತಿಗೆ ಸಿನೆಮಾ ಬಿಡುಗಡೆ ಮಾಡುವ ಭರವಸೆಯಿದೆ” ಎನ್ನುತ್ತಾರೆ ಹೆಗಡೆ.
ವಿ ಹರಿಕೃಷ್ಣ ಸಂಗೀತ ನೀಡಿದ್ದು, ಅನಿಕೇತ್ ಸಿನೆಮ್ಯಾಟೋಗ್ರಾಫರ್. ಮುಂದಿನ ತಿಂಗಳು ಆಡಿಯೋ ಬಿಡುಗಡೆಗೆ ಸಜ್ಜಾಗುತ್ತಿದೆ ಚಿತ್ರತಂಡ.

Write A Comment