ಅಂತರಾಷ್ಟ್ರೀಯ

ಬಾಕ್ಸ್ ಆಫೀಸ್ ನಲ್ಲಿ ದೂಳೆಬ್ಬಿಸಿದ ಬ್ಯಾಟ್ ಮ್ಯಾನ್ Vs ಸೂಪರ್ ಮ್ಯಾನ್ ಚಿತ್ರ; ಚಿತ್ರ ತೆರೆಗೆ ಬಂದ ಮೊದಲ ದಿನವೇ 27.7 ಮಿಲಿಯನ್ ಡಾಲರ್ ಗಳಿಕೆ

Pinterest LinkedIn Tumblr

batman-v-superman

ಲಾಸ್ ಏಂಜಲೀಸ್: ಇಬ್ಬರು ಸೂಪರ್ ಹೀರೋಗಳನ್ನು ಒಂದೇ ಚಿತ್ರದಲ್ಲಿ ನೋಡುವುದೆಂದರೆ ಅಭಿಮಾನಿಗಳಿಗೆ ರಸದೌತಣ ಉಣಬಡಿಸಿದಂತೆ.

ಅಂತೆ ಹಾಲಿವುಡ್ ನಲ್ಲಿ ಬಿಡುಗಡೆಯಾದ ಬ್ಯಾಟ್ ಮ್ಯಾನ್ Vs ಸೂಪರ್ ಮ್ಯಾನ್ ಡಾನ್ ಆಫ್ ಜಸ್ಟೀಸ್ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದಿದೆ. ಚಿತ್ರ ಬಿಡುಗಡೆಯಾದ ಒಂದೇ ದಿನದಲ್ಲಿ 27.7 ಮಿಲಿಯನ್ ಡಾಲರ್ ಕಲೆಹಾಕಿದೆ ಎಂದು ಸ್ಟುಡಿಯೋ ಸಂಸ್ಥೆ ಹೇಳಿದೆ.

ಐಮ್ಯಾಕ್ಸ್ ನಲ್ಲಿ ಗುರುವಾರ ಬಿಡುಗಡೆಯಾದ ಚಿತ್ರ 3.6 ಮಿಲಿಯನ್ ಡಾಲರ್ ಕಲೆ ಹಾಕಿದೆ ಎಂದು ವಾರ್ನರ್ ಬ್ರೋಸ್ ಹೇಳಿಕೊಂಡಿದೆ.

ಹಾಲಿವುಡ್ ನ ಸೂಪರ್ ಹೀರೋಗಳಾದ ಬ್ಯಾಟ್ ಮ್ಯಾನ್ ಮತ್ತು ಸೂಪರ್ ಮ್ಯಾನ್ ಗಳನ್ನು ಒಂದೇ ಚಿತ್ರದಲ್ಲಿ ಕಾಣುವುದು ವಿಶೇಷ. ಅದರಂತೆ ಬೆನ್ ಅಫ್ಲೇಕ್ ಮತ್ತು ಹೆನ್ರಿ ಕವಿಲ್ ಸೂಪರ್ ಹೀರೋಗಳನ್ನು ಇಟ್ಟುಕೊಂಡು ಚಿತ್ರವನ್ನು 250 ಮಿಲಿಯನ್ ಡಾಲರ್ ನಲ್ಲಿ ನಿರ್ಮಾಣವಾಗಿತ್ತು. ಸದ್ಯ ಚಿತ್ರದ ಗಳಿಕೆಯಲ್ಲಿ ಉತ್ತಮವಾಗಿದ್ದು, ವಾರಾಂತ್ಯಕ್ಕೆ 150 ಮಿಲಿಯನ್ ಡಾಲರ್ ಗಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ನಿರೀಕ್ಷಿತ ಫಾಸ್ಟ್ ಅಂಡ್ ಫ್ಯೂರಿಸ್ 7 ಚಿತ್ರ ವಾರಾಂತ್ಯದಲ್ಲಿ 15.8 ಮಿಲಿಯನ್ ಡಾಲರ್ ಗಳಿಸಿತ್ತು. ಈ ದಾಖಲೆಯನ್ನು ಮೀರಿದಿರುವ ಬ್ಯಾಟ್ ಮ್ಯಾನ್ ಮತ್ತು ಸೂಪರ್ ಮ್ಯಾನ್ ಚಿತ್ರ 27.7 ಮಿಲಿಯನ್ ಡಾಲರ್ ಕಲೆಹಾಕಿದೆ.

Write A Comment