ಕರ್ನಾಟಕ

ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಕೆನಡಾ ಮರ ಮತ್ತು ಅರಣ್ಯ ಉತ್ಪನ್ನಗಳ ನಿಯೋಗ ಭೇಟಿ

Pinterest LinkedIn Tumblr

canadaಬೆಂಗಳೂರು,ಮಾ.21- ಭಾರತ- ಕೆನಡಾ ನಡುವೆ ಮರದ ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಲಭ್ಯವಿರುವ ಸಾಧ್ಯತೆಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ವ್ಯಾಪಾರಿಗಳ ಒಂದು ತಂಡ, ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಭೇಟಿ ನೀಡಿತ್ತು. ಭೇಟಿ ವೇಳೆ ಮರ ಮತ್ತು ಮರಗೆಲಸದ ಉದ್ದಿಮೆಗಳ ಸದಸ್ಯರೊಂದಿಗೆ ಸಭೆ ನಡೆಸಿದ ನಿಯೋಗ, ಬ್ರಿಟಿಷ್ ಕೊಲಂಬಿಯಾ ಕೆನಡಾದಿಂದ ಭಾರತಕ್ಕೆ ಮರದ ಆಮದು ಪ್ರಮಾಣ ವೃದ್ದಿಸಲು ಇರುವ ಮಾರ್ಗಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಿದರು.

ಬೃಹತ್ ಪ್ರಮಾಣದ ಮರದ ದಿಮ್ಮೆಗಳನ್ನು ಉತ್ಪಾದಿಸುವ ಸಂಸ್ಥೆಗಳಾಗಿರುವ ಕ್ಯಾನ್‌ಫಾರ್, ವೆಸ್ಟ್‌ಫ್ರಾಸೆರ್, ಉದ್ಯಮ ಸಂಸ್ಥೆಗಳಾದ ಕೋಸ್ಟ್ ಫಾರೆಸ್ಟ್ ಪ್ರೋಡೆಕ್ಟ್ ಅಸೋಸಿಯೇಷನ್‌ಗಳ ಹಿರಿಯ ವ್ಯವಸ್ಥಾಪಕರು, ನ್ಯಾಚುರಲ್ ರಿಸೋರ್ಸ್ ಕೆನಡಾ ಮತ್ತು ಪ್ರಾಂತೀಯ ಹಾಗೂ ಫೆಡರಲ್ ಸರ್ಕಾರಿ ಪ್ರತಿನಿಧಿಗಳನ್ನು ಒಳಗೊಂಡಂತೆ ಒಟ್ಟು 22 ಸದಸ್ಯರು ನಿಯೋಗದಲ್ಲಿದ್ದರು. ಇದರೊಂದಿಗೆ ಎಫ್‌ಐಐ ಇಂಡಿಯಾ ಮತ್ತು ಮಾರ್ಕೆಟ್ ಡೆವಲಪ್‌ಮೆಂಟ್ ಏಜೆನ್ಸಿ ಫಾರ್ ಕೆನಡಿಯನ್ ವುಡ್ ನೆರವಿನೊಂದಿಗೆ ನಿಯೋಗವು, ಪ್ರಮುಖ ಉತ್ಪಾದಕರು, ಡೆವಲಪರ್‌ಗಳು ಮತ್ತು ವಾಸ್ತುಶಿಲ್ಪಿಗಳನ್ನು ಭೇಟಿಯಾಗಿ, ಸಹಭಾಗಿತ್ವದ ಅವಕಾಶಗಳ ಕುರಿತು ಚರ್ಚಿಸಲಿದ್ದಾರೆ.

ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಿಂದ ಸುಸ್ಥಿರ, ಪ್ರಾಮಾಣೀಕೃತ ಮರವನ್ನು ( ಪಿಇಎಫ್‌ಸಿ/ಎಫ್‌ಎಸ್‌ಸಿ) ಸಂಗ್ರಹಿಸಲು ಆಮದುದಾರರು ಮತ್ತು ನಿರ್ದಿಷ್ಟ ವ್ಯಾಪಾರಿಗಳಿಗೆ ಈ ಕಾರ್ಯಕ್ರಮ ನೆರವಾಗಿದೆ. ಸ್ಪೇಸಿಸ್ ಆಫ್ ವೆಸ್ಟರ್ನ್ ಹೆಮ್‌ಲಾಕ್, ಡೌಗ್ಲಾಸ್-ಫಿರ್, ಎಸ್‌ಪಿಎಫ್, ವುಡನ್ ರೆಡ್ ಸೆಡಾರ್ ಮತ್ತು ಎಲ್ಲೋ ಸೆಡಾರ್‌ನ್ನು ಡೋರ್‌ಗಳು, ಡೋರ್ ಜಾಮ್ಸ್ , ಕಿಟಕಿ, ಪೀಠೋಪಕರಣ, ಪ್ಯಾನಲಿಂಗ್ ಹಾಗೂ ಪೆರ್ಗೋಲಾಸ್, ಗಾಸೆಬೋಸ್ ರೀತಿಯ ಹೊರಾಂಗಣ ಬಳಕೆಗೆ ಹೆಚ್ಚು ಬಳಸಲಾಗುತ್ತದೆ. ಹಾಗೇ ಒಳಾಂಗಣ, ಹೊರಾಂಗಣ ವಿನ್ಯಾಸ ಹಾಗೂ ಸ್ಟ್ರಕ್ಚರಲ್ ಬಳಕೆಯಲ್ಲೂ ಈ ರೀತಿಯ ಮರದ ಬಳಕೆ ಹೇರಳವಾಗಿದೆ.

ಕೆನಡಿಯನ್ ವುಡ್‌ನ ಮೋಹಕತೆ ಹಾಗೂ ವೈವಿಧ್ಯತೆಯನ್ನು ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಎಫ್‌ಐಐ ಇಂಡಿಯಾ, ಬಿ.ಸಿ.ಕಂಪನಿಗಳ ಜತೆಗೂಡಿ, ದೇಶದ ಬೃಹತ್ ವುಡ್ ಟ್ರೇಡ್ ಶೋ ಎನಿಸಿರುವ ಇಂಡಿಯಾವುಡ್ 2016ರಲ್ಲಿ ಎಕ್ಸ್‌ಪೀರಿಯೆನ್ಸ್ ಜೋನ್‌ಗಳನ್ನು ಸೃಷ್ಟಿಸಿತ್ತು.

Write A Comment