ಕರ್ನಾಟಕ

ಈ ಬಸ್‌ನಿಲ್ದಾಣದಲ್ಲಿ ಕೂರುವಾಗ ಎಚ್ಚರ : ನಿರ್ಲಕ್ಷ್ಯ ವಹಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ

Pinterest LinkedIn Tumblr

danger

ಬೆಂಗಳೂರು: ಪ್ರಯಾಣಿಕರೇ ನಗರದ ಬಸ್ ತಂಗುದಾಣಗಳಲ್ಲಿ ಕುಳಿತು ಕೊಳ್ಳಬೇಕಾದರೆ ಎಚ್ಚರವಹಿಸಿ, ನಿರ್ಲಕ್ಷ್ಯ ವಹಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ.ಏಕೆ ಈ ಮಾತನ್ನು ಹೇಳುತ್ತಿದ್ದೇವೆ ಎಂದರೆ, ಸುದ್ಗುಂಟೆ ಸಮೀಪದ ಬಸ್ ತಂಗುದಾಣವೊಂದರಲ್ಲಿ ಜಾಹೀರಾತು ಫಲಕದಲ್ಲಿ ಅಳವಡಿಸಿರುವ ವಿದ್ಯುತ್ ವೈರ್‌ಗಳು ನೇತಾಡುತ್ತಿದ್ದು, ಅನಾಹುತಕ್ಕೆ ಆಹ್ವಾನಿಸುತ್ತದೆ. ಪಾಲಿಕೆಯವರೆನೋ ಜಾಹೀರಾತು ಅಳವಡಿಕೆಗೆ ತಂಗುದಾಣಗಳಲ್ಲಿ ಅವಕಾಶ ಕಲ್ಪಿಸಿದ್ದಾರೆ. ಆದರೆ ಅದನ್ನು ನಿರ್ವಹಣೆ ಮಾಡುವ ಜಾಹೀರಾತು ಕಂಪೆನಿಗಳು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ.

ಜಾಹೀರಾತು ಫಲಕಗಳಿಗೆ ವಿದ್ಯುತ್ ದೀಪಗಳನ್ನು ಅಳವಡಿಸಲು ವೈರ್ ಗಳನ್ನು ಎಲ್ಲೆಂದರಲ್ಲಿ ಸಂಪರ್ಕ ತೆಗೆದು ಕೊಂಡಿದ್ದಾರೆ. ಅವುಗಳು ಹೊರಗೆ ಕಾಣುವಂತೆ ನೇತಾಡುತ್ತಿವೆ. ಮೊದಲೇ ಈ ತಂಗುದಾಣಗಳಲ್ಲಿ ಅಳವಡಿಸಿರುವ ಆಸನ ಗಳು ಕಬ್ಬಿಣದಿಂದ ಕೂಡಿದ್ದು, ಅವುಗಳಲ್ಲಿ ವಿದ್ಯುತ್ ಪ್ರವಹಿಸಿದರೆ ಕುಳಿತುಕೊಂಡವರಿಗೆ ವಿದ್ಯುತ್ ಶಾಕ್ ಹೊಡೆಯುವುದರಲ್ಲಿ ಅನುಮಾನವೇ ಇಲ್ಲ.ಪಾಲಿಕೆಯವರು ಜಾಹೀರಾತು ಅಳವಡಿ ಸಲು ಅನುಮತಿ ನೀಡಿದರೆ ಸಾಲದು, ಅದರ ಸಾಧಕ-ಬಾಧಕಗಳ ಕುರಿತು ಆಗಿಂದಾಗ್ಗೆ ಪರಿಶೀಲಿಸಿ ಸಂಬಂಧಿಸಿದ ಜಾಹೀರಾತು ಕಂಪೆನಿಗಳಿಗೆ ದುರಸ್ತಿಪಡಿಸುವಂತೆ ಸೂಚಿಸಬೇಕು.

ಇದು ಈ ಪ್ರದೇಶವೊಂದರ ಸಮಸ್ಯೆಯಲ್ಲ, ನಗರದ ಬಹುತೇಕ ಬಸ್ ತಂಗುದಾಣ ಗಳಲ್ಲಿ ಒಂದಲ್ಲೊಂದು ಸಮಸ್ಯೆಗಳು ಕಾಡು ತ್ತಲೇ ಇರುತ್ತವೆ. ಇನ್ನೂ ಕೆಲವು ತಂಗುದಾಣಗಳಲ್ಲಿ ಅವಧಿ ಮುಗಿದ ಜಾಹೀರಾತು ಫಲಕ ಗಳು ರಾರಾಜಿಸುತ್ತಿವೆ. ಇದರಿಂದ ತಂಗುದಾಣದಲ್ಲಿ ಅಳವಡಿಸಿರುವ ಬಸ್ ನಿಲ್ದಾಣಗಳ ಹೆಸರುಗಳೇ ನಾಪತ್ತೆ ಯಾಗಿದ್ದು, ಹೊರಗಿನಿಂದ ಬರುವ ಪ್ರಯಾಣಿಕರಿಗೆ ಪ್ರದೇಶದ ಮಾಹಿತಿ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಬಂದೊದಗಿದೆ. ಅಪಾಯ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

Write A Comment