ಕರ್ನಾಟಕ

‘ರಣತಂತ್ರ’ಕ್ಕೆ ಮೆಚ್ಚಿದ ಪ್ರೇಕ್ಷಕ !

Pinterest LinkedIn Tumblr

ranatantra

ನವದಂಪತಿ ಹನಿಮೂನ್‌ಗೆ ಪ್ರದೇಶವೊಂದರಲ್ಲಿ ಎದುರಾದ ಭಯಾನಕ ಘಟನೆಯಿಂದ ಹೇಗೆ ಪರಾಗಿ ಹೊರಬರುತ್ತಾರೆ ಅಲ್ಲಿ ಎನೆಲ್ಲಾ ತೊಂದರೆ ಅನುಭವಿಸುತ್ತಾರೆ ಪ್ರೀತಿ, ರೋಮಾನ್ಸ್, ಅಪರಾಧ ಥ್ರಿಲ್, ಹ್ಯೂಮರ್ ಎಲ್ಲವು ಸೇರಿಕೊಂಡ ಚಿತ್ರವೇ ರಣತಂತ್ರ ಈ ವಾರ ಬಿಡುಗಡೆಯಾಗಿರುವ ಈ ಚಿತ್ರವನ್ನು ಪ್ರೇಕ್ಷಕ ಮೆಚ್ಚಿದ್ದಾನೆ.

ರೋಮಾಂಟಿಕ್ ಥ್ರಿಲ್ಲರ್ ಚಿತ್ರವೆಂದು ಬಿಂಬಿತವಾಗಿರುವ ರಣತಂತ್ರ’ ದಲ್ಲಿ ನಾಯಕನಾಗಿ ವಿಜಯರಾಘವೇಂದ್ರ, ನಾಯಕಿ ಹರಿಪ್ರಿಯ ನಟಿಸಿದ್ದಾರೆ. ಥ್ರಿಲ್ಲರ್ ಸಿನಿಮಾವಾಗಿರುವುದರಿಂದ ಹೆಚ್ಚು ಕಾಲ ರಾತ್ರಿ ವೇಳೆ ಚಿತ್ರೀಕರಣ ನಡೆಸಲಾಗಿದೆಯಂತೆ.

ಕುತೂಹಲ ಸನ್ನಿವೇಶಗಳು ಬಂದಾಗ ಮಂತ್ರಗಳು ಹೇಳುವುದು ವಿಶೇಷವಾಗಿದೆ. ಐಟಂ ಹಾಡಿಗೆ ಮೇಘನಾನಾಯ್ಡು ಹೆಜ್ಜೆ ಹಾಕಿದ್ದಾರೆ.

ಸಂಗೀತ ಒದಗಿಸಿರುವ ಕಾರ್ತಿಕ್ ಗೀತೆಗಳು ಈಗಾಗಲೆ ಹಿಟ್ ಆಗಿದ್ದು, ಮತ್ತು ವಿಡಿಯೋ ಹಾಡುಗಳು ಪ್ರಸಿದ್ದಿಯಾಗಿದೆ. ಎರಡು ವರ್ಷಗಳ ಹಿಂದೆ ಶುರುವಾಗಿದ್ದ ಚಿತ್ರವು ಪೋಸ್ಟ್‌ಪ್ರೊಡಕ್ಷನ್ ಕೆಲಸದಿಂದ ತಡವಾಗಿದೆ. ನಿರ್ದೇಶನ ಆದಿರಾಂ, ಛಾಯಗ್ರಹಣ ರಾಜೇಶ್.ಕೆ.ನಾರಾಯಣ್, ಸಂಕಲನ ಶ್ರೀಕಾಂತ್, ಸಾಹಸ ಮಾಸ್‌ಮಾದ ಅವರದಾಗಿದೆ.

೭.೧ ಸೌಂಡ್‌ನಲ್ಲಿ ಚೆನ್ನಾಗಿ ಮೂಡಿಬಂದಿರುವುದರಿಂದ ತೆಲುಗು, ತಮಿಳು ಮತ್ತು ಮಲೆಯಾಳಂ ಭಾಷೆಗೆ ಡಬ್ ಆಗಿದ್ದು, ಕನ್ನಡ ನಂತರ ಅಲ್ಲಿನ ಕೇಂದ್ರಗಳಲ್ಲಿ ತೆರೆಗೆ ಬರಲಿದೆ. ಹಿಂದಿಯಲ್ಲಿ ರಿಮೇಕ್ ಮಾಡಲು ಬೇಡಿಕೆ ಬಂದ ಕಾರಣ ನಿರ್ಮಾಪಕ ಎಸ್.ರಮೇಶ್ ಚಿತ್ರವನ್ನು ಜನರು ಇಷ್ಟಪಡುತ್ತಾರೆಂಬ ಆಶಾಭಾವನೆಯಲ್ಲಿದ್ದಾರೆ. ಯು ಪ್ರಮಾಣಪತ್ರ ಹೊಂದಿರುವ ಸಿನಿಮಾವನ್ನು ವಿತರಕ ರಾಜಣ್ಣನವರು ಸುಮಾರು ೧೫೦ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಾರೆ.

ಸಾಹಿತ್ಯ-ನಾಗೇಂದ್ರ ಪ್ರಸಾದ್-ಕೆ.ಕಲ್ಯಾಣ್-ಕವಿರಾಜ್, -ಭವಾನಿಶಂಕರ್, ಸಹ ನಿರ್ದೇಶನವಿರುವ ರಣತಂತ್ರದಲ್ಲಿ ಸತ್ಯಜಿತ್, ಭಜರಂಗಿ ಮಾದು, ಸಪ್ನೊಂಕಾ ರಾಣಿ ಐಶ್ವರ್ಯ, ಕುರಿ ರಂಗ, ಶಶಿಕಲಾ, ಸೋನಂ, ಭಾರತಿ, ಶೋಬಿನಾ, ಅ೦ಜಲಿ ಅಭಿನಯಿಸಿದ್ದಾರೆ.

Write A Comment