ಕರ್ನಾಟಕ

ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಂತೆಯಲ್ಲಿ ನಿಂತ ಕಬೀರ; ಏಪ್ರಿಲ್ ನಲ್ಲಿ ಧ್ವನಿ ಸುರುಳಿ ಬಿಡುಗಡೆ ಮಾಡಲು ಸಿದ್ಧತೆ

Pinterest LinkedIn Tumblr

santheyalli-nintha-kabira

ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಸಂತೆಯಲ್ಲಿ ನಿಂತ ಕಬೀರ. ಇಂದ್ರ ಬಾಬು ನಿರ್ದೇಶನದ ಈ ಚಿತ್ರ ಸದ್ಯ ಡಿ.ಟಿ.ಎಸ್ ಹಂತಕ್ಕೆ ಬಂದು ತಲುಪಿದೆ. ಏಪ್ರಿಲ್ ಮೊದಲ ವಾರದಲ್ಲಿ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾದ ಧ್ವನಿ ಸುರುಳಿ ಬಿಡುಗಡೆ ಮಾಡಲು ಸಕಲ ರೀತಿಯ ತಯಾರಿ ನಡೆಯುತ್ತಿದೆ.

ಈ ಸಿಡಿ ಬಿಡುಗಡೆ ಸಮಾರಂಭಕ್ಕಾಗಿಯೇ ಸುಂದರವಾದ ಸೆಟ್ ಹಾಕಿಸಿ, ಸಂತ ಕಬೀರರ ಕಾಲಘಟ್ಟವನ್ನು ಮರುಸೃಷ್ಟಿಸುವುದು ಚಿತ್ರತಂಡದ ಪ್ಲಾನ್ ಆಗಿದೆ.

ಶಿವರಾಜ್ ಕುಮಾರ್ ನಾಯಕನಟರಾಗಿ ಕಾಣಿಸುತ್ತಿರುವ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರ ೧೫ನೇ ಶತಮಾನದ ಸಂತರಾದ ಕಬೀರರ ಕುರಿತ ಚಿತ್ರವಾಗಿದೆ. ಈ ಚಿತ್ರ ಭೀಷ್ಮ ಸಾಹ್ನಿ ಅವರ ಕಥೆಯನ್ನು ಆಧರಿಸಿದೆ.

ಬಹಳ ಉತ್ಸಾಹದಿಂದ ನಿರ್ದೇಶನ ಮಾಡಿರುವ ರಾಜ್ಯ ಪ್ರಶಸ್ತಿ ವಿಜೇತ ಕಬ್ಬಡ್ಡಿ ಸಿನಿಮಾದ ನಿರ್ದೇಶಕ ನರೇಂದ್ರ ಬಾಬು ಈ ಸಿನಿಮಾದ ಮೂಲಕ ಇಂದ್ರ ಬಾಬು ಆಗಿದ್ದಾರೆ. ೪೮ ದಿವಸಗಳ ಕಾಲ ನವೀನ್ ಕುಮಾರ್ ಐ ಅವರ ಛಾಯಾಗ್ರಹಂದಲ್ಲಿ ಬೆಂಗಳೂರು, ಕೆ ಆರ್ ಎಸ್ ಹಿನ್ನೀರು, ಚಿಕ್ಕಮಗಳೂರು ಹಾಗೂ ಚಾಲಾಕುಡಿಯಲ್ಲಿ ಚಿತ್ರೀಕರಣ ಮಾಡಿದ್ದಾರೆ.

ಇಸ್ಮಾಯಿಲ್ ದರ್ಬಾರ್ ಅವರ ಸಂಗೀತ ಇರುವ ಈ ಚಿತ್ರಕ್ಕೆ ಸಂತ ಕಬೀರರ ‘ದೋಹಾ’ ಪ್ರಧಾನವಾಗಿದೆ. ಐದು ಹಾಡುಗಳು ಹಾಗೂ ನಾಲ್ಕು ದೋಹಗಳು ರಜತ ಪರದೆಯಲ್ಲಿ ಆಕರ್ಷಿಸಲಿದೆ. ಗೋಪಾಲ ವಾಜಪೇಯಿ ಅವರ ಗೀತ ಸಾಹಿತ್ಯ, ಚಿತ್ರಕಥೆ ಹಾಗೂ ಸಂಭಾಷಣೆ ಈ ಚಿತ್ರಕ್ಕಿದೆ.

ಸುಬ್ರಮಣ್ಯ ಪ್ರೊಡಕ್ಷನ್ ಅಡಿಯಲ್ಲಿ ಹೊಸಪೇಟೆಯ ಕುಮಾರಸ್ವಾಮಿ ಪತ್ತಿಕೊಂಡ ನಿರ್ಮಾಣದ ‘ಸಂತೆಯಲ್ಲಿ ನಿಂತ ಕಬೀರ’ ಚಿತ್ರದಲ್ಲಿ ತಮಿಳು ನಟ ಶರತ್ ಕುಮಾರ್, ದತ್ತಣ್ಣ, ಅವಿನಾಶ್, ಶರತ್ ಲೋಹಿತಾಶ್ವ, ಭಾಗೀರಥಿ ಬಾಯಿ ಕದಂ, ಪ್ರಶಾಂತ್ ಸಿದ್ದಿ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.

Write A Comment