ಅಂತರಾಷ್ಟ್ರೀಯ

ಶಾಲಾ ಮಕ್ಕಳಿಗೆ ಐಎಸ್ ಉಗ್ರರು ನಡೆಸಿದ ಶಿರಚ್ಛೇದನ ವಿಡಿಯೊ ತೋರಿಸಿದ ಶಿಕ್ಷಕಿಗೆ 300 ಡಾಲರ್ ದಂಡ

Pinterest LinkedIn Tumblr

2222

ನ್ಯೂಯಾರ್ಕ್: ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ತಮಗೆ ಸೆರೆಸಿಕ್ಕ ವಿದೇಶಿಯರ ಶಿರಚ್ಛೇದ ಮಾಡುತ್ತಿರುವ ದೃಶ್ಯಾವಳಿಗಳನ್ನು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸಿದ್ದ ನಗರದ ಮಾಧ್ಯಮಿಕ ಶಾಲೆಯೊಂದರ ಶಿಕ್ಷಕಿಗೆ 300 ಡಾಲರ್‌ಗಳ ದಂಡ ವಿಧಿಸಲಾಗಿದೆ. ವಾರ್ಷಿಕ 1,05,000 (1 ಲಕ್ಷ 5 ಸಾವಿರ) ಡಾಲರ್ ವೇತನ ಪಡೆಯುವ ಹಿರಿಯ ಶಿಕ್ಷಕಿ ಅಲೆಕ್ಸಿಸ್ ನಜಾರಿಯೊ ಮಕ್ಕಳಿಗೆ ವಿಡಿಯೋ ತೋರಿಸಿದ ಶಿಕ್ಷಕಿ. ಈ ಆರೋಪ ಬಂದ ನಂತರ ಪೊಲೀಸರು ತನಿಖೆ ನಡೆಸಿದಾಗ ಶಾಲಾ ಮಕ್ಕಳು ತಾವು ಐಎಸ್ ಉಗ್ರರು ನಡೆಸಿರುವ ಶಿರಚ್ಛೇದನ ಕೃತ್ಯ ನೋಡಿ ತುಂಬ ಭಯಗೊಂಡಿದ್ದಾಗಿ ತಿಳಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Write A Comment