ಅಂತರಾಷ್ಟ್ರೀಯ

ವಿಶ್ವದ ನಂ1 ಕಬ್ಬಿಣದ ಗಣಿ-ದಣಿ ರೋಗರ್ ಮತ್ತು ಅವರ ಕುಟುಂಬ ವಿಮಾನ ದುರಂತದಲ್ಲಿ ಸಾವು

Pinterest LinkedIn Tumblr

ro

ಸಾವೊಪೌಲೊ: ಇಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ವಿಶ್ವದ ಅಗ್ರಗಣ್ಯ ಕಬ್ಬಿಣದ ಅದಿರು ಉತ್ಪಾದಕ ರೋಗರ್ ಆಗ್ನೇಲಿ ಹಾಗೂ ಅವರ ಕುಟುಂಬದವರು ಸೇರಿದಂತೆ ಏಳು ಮಂದಿ ಮೃತಪಟ್ಟಿರುವ ಘಟನೆ ನಡೆದಿದೆ. 56ರ ಹರೆಯದ ರೋಗರ್ ಬ್ಯಾಂಕರ್ ಕೂಡ ಆಗಿದ್ದರು. ವಿಮಾನ ಟೇಕ್ ಆಫ್ ಆಗುತ್ತಿದ್ದಂತೆಯೇ ತಾಂತ್ರಿಕ ತೊಂದರೆಯಿಂದಾಗಿ ಮನೆಯೊಂದರ ಮೇಲೆ ಪತನಗೊಂಡಿತು. ಕೆಳಗೆ ಬೀಳುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಈ ವೇಳೆ ವಿಮಾನದಲ್ಲಿದ್ದ ಉದ್ಯಮಿ ರೋಗರ್, ಅವರ ಪತ್ನಿ ಮತ್ತು ಇಬ್ಬರು ಮಕ್ಕಳು ಹಾಗೂ ಇತರ ಮೂವರು ಬೆಂಕಿಯಲ್ಲಿ ಬೆಂದು ಹೋದರು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ಬಿದ್ದಿದ್ದರಿಂದ ಎರಡು ಮನೆಗಳು ಜಖಂ ಆಗಿದ್ದು , ಮನೆಯಲ್ಲಿದ್ದ ವ್ಯಕ್ತಿಯೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ಉದ್ಯಮಿ ರೋಗರ್ ಅವರು, ರಿಯಡಿ ಜೆನೈರೋದಲ್ಲಿ ನಡೆಯುವ ವಿವಾಹ ಸಮಾರಂಭವೊಂದಕ್ಕೆ ಪತ್ನಿ ಆಂಡ್ರಿಯಾ, ಪುತ್ರ ಜೋಆವೊ ಹಾಗೂ ಪುತ್ರಿ ಅನ್ನಾ ಕರೋಲಿನಾ ಮತ್ತು ಅವರ ಸಂಬಂಧಿಕರೊಂದಿಗೆ ತೆರಳುತ್ತಿದ್ದರು. ತನ್ನ ಶಿಸ್ತು , ಪ್ರಾಮಾಣಿಕತೆ, ಕಾರ್ಯಕ್ರಮಗಳಿಂದಾಗಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ರೋಗರ್ ಕೊನೆಗೆ ವೇಲ್ ಕಂಪನಿ ಸಿಇಒ ಆಗಿದ್ದರು. ನಂತರ ಬ್ಯಾಂಕರ್ ಆಗಿ ಗಣಿ ಉದ್ಯಮಿಯಾಗಿ ಜಗತ್ತಿನಾದ್ಯಂತ ಮನ್ನಣೆ ಗಳಿಸಿದ್ದರು.

Write A Comment