ಕರ್ನಾಟಕ

ಲಾಕಪ್‌ನಲ್ಲಿ ಆರೋಪಿ ಶಂಕಾಸ್ಪದ ಸಾವು

Pinterest LinkedIn Tumblr

Crime-1ಬೆಂಗಳೂರು,ಮಾ.೨೦-ಆಭರಣ ಕಳವು ಆರೋಪದ ಮೇಲೆ ವಿಚಾರಣೆ ಎದುರಿಸುತ್ತಿದ್ದ ಕೈದಿಯೊಬ್ಬ ಜೀವನಭೀಮಾನಗರ(ಜೆಬಿನಗರ) ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.
ಲಾಕಪ್‌ನಲ್ಲಿ ಕೈದಿ ಮೃತಪಟ್ಟ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಿ ಜೆಬಿನಗರ ಪೊಲೀಸ್ ಇನ್ಸ್‌ಪೆಕ್ಟರ್ ಹಿತೇಂದ್ರ, ಸಬ್‌ಇನ್ಸ್‌ಪೆಕ್ಟರ್,೪ ಮಂದಿ ಪೇದೆಗಳು ಸೇರಿ ೬ಮಂದಿಯನ್ನು ಸೇವೆಯಿಂದ ಅಮಾನತ್ತು ಪಡಿಸಲಾಗಿದೆ.
ಕೆಲಸ ಮಾಡುತ್ತಿದ್ದ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ ಆರೋಪದಲ್ಲಿ ಠಾಣೆಗೆ ಕರೆದತಂದು ಲಾಕಪ್‌ಗೆ ಹಾಕಿ ವಿಚಾರಣೆ ನಡೆಸುತ್ತಿದ್ದ ಒರಿಸ್ಸಾ ಮೂಲದ ಮಹೇಂದ್ರ ನಿನ್ನೆ ರಾತ್ರಿ ಠಾಣೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದನು.
ವಿಚಾರಣೆ ವೇಳೆ ಮಹೇಂದ್ರನಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಕೂಡಲೇ ಆತನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಜೆಬಿ ನಗರ ಪೊಲೀಸರು ತಿಳಿಸಿದ್ದರು.
ಸುಮಾರು ೧೨ ವರ್ಷಗಳಿಂದ ಹೆಚ್‌ಎಎಲ್ ನಿವಾಸಿಯೊಬ್ಬರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿದ್ದನು. ಕೆಲವ ದಿನಗಳ ಹಿಂದೆ ಮಹೇಂದ್ರ ಆಭರಣ ಕದ್ದಿದ್ದಾನೆಂದು ಆರೋಪಿಸಿ ಮನೆ ಮಾಲೀಕ ಜೀವನ್ ಭೀಮಾನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರಿನನ್ವಯ ಮಹೇಂದ್ರನನ್ನು ಬಂಧಿಸಿದ್ದ ಪೊಲಿಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದರು. ಆದರೆ ಠಾಣೆಯ ಲಾಕಪ್‌ನಲ್ಲಿಯೇ ಆತ ಮೃತಪಟ್ಟಿದ್ದನು.ಲಾಕಪ್‌ನಲ್ಲಿ ಮೃತಪಟ್ಟಿರುವ ಹಿನ್ನಲೆಯಲ್ಲಿ ಪ್ರಕರಣದ ತನಿಖೆಯು ಸಿಐಡಿಗೆ ವರ್ಗಾವಣೆಯಾಗಿದ್ದು ಈ ಸಂಬಂಧ ಇನ್ಸ್‌ಪೆಕ್ಟರ್ ಹಿತೇಂದ್ರ, ಸಬ್‌ಇನ್ಸ್‌ಪೆಕ್ಟರ್,೪ ಮಂದಿ ಪೇದೆಗಳು ಸೇರಿ ೬ಮಂದಿಯನ್ನು ಅಮಾನತ್ತು ಗೊಳಿಸಲಾಗಿದೆ

Write A Comment