ಕರ್ನಾಟಕ

ಮಾತಿಲ್ಲದ ಆದಿವಾಸಿಗಳ `ಬರ್ತ್’ !

Pinterest LinkedIn Tumblr

Birth

ಮಾತಿಲ್ಲದ ಸಂಭಾಷಣೆ ಇರುವ ಪ್ರಯೋಗಾತ್ಮಕ ಚಿತ್ರ `ಬರ್ತ್’ ಚಿತ್ರೀಕರಣ ಮುಗಿಸಿದೆ. ಚಿತ್ರದಲ್ಲಿ ಮಾತಿಲ್ಲದಿದ್ದರೂ ಮೂರು ಹಾಡುಗಳಿವೆ. ಆದಿವಾಸಿ ಬುಡಕಟ್ಟು ಜನಾಂಗದ ಕಥೆಯನ್ನೊಳಗೊಂಡ `ಬರ್ತ್’ ವಿಶ್ವ ದಾಖಲೆ ಮಾಡಲು ಹೊರಟಿದೆ.

ಸಾಂಪ್ರದಾಯಿಕ ಚಿತ್ರಗಳನ್ನು ಬದಿಗಿತ್ತು, ಪ್ರಯೋಗಾತ್ಮಕ ಚಿತ್ರವನ್ನು ಮಾಡಲು ಹೊರಟಿರುವ ನಿರ್ದೇಶಕ ಶಿವು ಹೊಳಲು ಅವರು `ಬರ್ತ್’ ಚಿತ್ರವು ಕುತೂಹಲ ಮೂಡಿಸಿದೆ. ನಾಳೆಯನ್ನು ಮನುಷ್ಯ ಮಾತ್ರ ಯೋಚಿಸಲಿದ್ದಾನೆ. ಪ್ರಾಣಿ-ಪಕ್ಷಿಗಳು ಸ್ವಾರ್ಥವಿಲ್ಲದೇ ಬದುಕಲಿವೆ.

ಬದುಕನ್ನು ಸಾರ್ಥಕ ಮಾಡಿಕೊಳ್ಳಲು ಸ್ವಾರ್ಥ ಬಿಡಬೇಕೆನ್ನುವುದನ್ನು ಚಿತ್ರ ಹೇಳಲಿದೆ. ಮನುಷ್ಯ ಎಲ್ಲವೂ ಬೇಕೆನ್ನುತ್ತಾನೆ. ಆದರೆ, ಪ್ರಾಣಿ-ಪಕ್ಷಿಗಳು ಭಿನ್ನವಾಗಿ ಬದುಕುತ್ತವೆ. ಆದಿವಾಸಿ ಜನಾಂಗ ಕೂಡ ಬದುಕನ್ನು ಸ್ವಾರ್ಥಕ್ಕೆ ಬಳಸಿಕೊಂಡಿರಲಿಲ್ಲ. ಅದನ್ನು ಚಿತ್ರ ತೋರಿಸಲಿದೆ ಎನ್ನುತ್ತಾರೆ ಶಿವು ಹೊಳಲು.

ಬದುಕನ್ನು ಸಾರ್ಥಕ ಮಾಡಿಕೊಳ್ಳುವ `ಬರ್ತ್’ ಚಿತ್ರವು ಅರಣ್ಯದಲ್ಲಿ ಹೆಚ್ಚಿನ ಭಾಗ ಚಿತ್ರೀಕರಣ ನಡೆದಿರುವುದು ವಿಶೇಷ. ನಿರ್ಮಾಪಕ ಚಂದ್ರಶೇಖರ್ ಅವರು ಪ್ರಾಯೋಗಾತ್ಮಕ ಚಿತ್ರಕ್ಕೆ ನಮ್ಮನ್ನು ಬೆಂಬಲಿಸಿರುವುದು ಸಂತಸ ತಂದಿದೆ ಎನ್ನುತ್ತಾರೆ.

ನಿರ್ಮಾಪಕ ಚಂದ್ರಶೇಖರ್ ಅವರು ರಂಗಕಲಾವಿದರಿಗೆ ಚಿತ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರದಲ್ಲಿ ಯಾರೂ ತುಟಿ ಬಿಚ್ಚಿಲ್ಲ. ಸ್ವಾರ್ಥದಿಂದ ಏನೆಲ್ಲಾ ಆಗುತ್ತದೆ ಎನ್ನುವುದನ್ನು ತೋರಿಸಲು ಈ ಚಿತ್ರ ಮಾಡಿದ್ದೇನೆ ಎನ್ನುತ್ತಾರೆ.

`ಬರ್ತ್’ನಲ್ಲಿ ಖಳನಾಯಕನಾಗಿ ಅಭಿನಯಿಸಿರುವ ನಿರ್ಮಾಪಕರು ಚಿತ್ರಕ್ಕಾಗಿ 2 ಕೋಟಿ ರೂ. ಖರ್ಚು ಮಾಡಿದ್ದೇನೆ. ಯಾವುದೇ ಕಮರ್ಷಿಯಲ್ ಸಿನಿಮಾಕ್ಕಿಂತ ಕಡಿಮೆ ಇಲ್ಲ ಎನ್ನುವಂತೆ ಚಿತ್ರ ಮೂಡಿಬಂದಿದೆ. ಪ್ರೇಕ್ಷಕರಿಗೆ ಹೊಸ ಬಗೆಯ `ಬರ್ತ್’ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಅಂದಹಾಗೆ ಚಂದ್ರಶೇಖರ್ ರಿಯಲ್ ಎಸ್ಟೇಟ್ ಉದ್ಯಮಿ.

ಚಿತ್ರಕ್ಕೆ ಸಂಗೀತ ನೀಡಿರುವ ಶಂಕರ್ ಅವರು, `ಒರಟ ಐ ಲವ್ ಯು` ಚಿತ್ರದ ಹಾಡುಗಳಂತೆ ಪ್ರೇಕ್ಷಕರಿಗೆ ಇಷ್ಟವಾಗಲಿವೆ. 3 ಹಾಡುಗಳಲ್ಲಿ 2ನ್ನು ರಾಜೇಶ್ ಕೃಷ್ಣನ್ ಹಾಡಿದ್ದರೆ, ಇನ್ನೊಂದಕ್ಕೆ ಶಮಿತಾ ಧ್ವನಿ ನೀಡಿದ್ದಾರೆ. ಇದೊಂದು ಪ್ರಯೋಗಾತ್ಮಕ ಸಿನಿಮಾ ಆಗಿರುವುದರಿಂದ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದೇವೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ ಶ್ರೀಕಿ ಚಿತ್ರದ ಕಥೆ ಕುತೂಹಲಕಾರಿಯಾಗಿದೆ. ಮಾತಿಲ್ಲದೆ ಪಾತ್ರ ಮಾಡುವುದು ಬಹಳ ಕಷ್ಟ. ಸಂಗೀತ, ಹಾಡು ಚೆನ್ನಾಗಿದ್ದು, ಹೊಸ ಬಗೆಯ ಸಿನಿಮಾವನ್ನು ಪ್ರೇಕ್ಷಕರು ಸ್ವೀಕರಿಸಲಿದ್ದಾರೆ ಎಂದರೆ ನಾಯಕಿ ದುನಿಯಾ ರಕ್ಷ್ಮಿ ಆದಿವಾಸಿ ಹುಡುಗಿಯ ಪಾತ್ರ ಖುಷಿ ಕೊಟ್ಟಿದೆ. ಇಲ್ಲಿಯವರೆಗಿನ ಚಿತ್ರಗಳಿಗಿಂತ ಬೇರೆಯದೇ ಪಾತ್ರ ನಿಭಾಯಿಸಿದ್ದೇನೆ. ಚಿತ್ರದ ಮೂರು ಹಾಡುಗಳು ಇಷ್ಟವಾಗಲಿವೆ ಎಂದು ಹೇಳಿಕೊಂಡರು.

ನಿರ್ಮಾಪಕ ಚಂದ್ರಶೇಖರ್ ಅವರ ಪುತ್ರರಾದ ಧನುಶ್ ಹಾಗೂ ತೇಜಸ್ ಈ ಚಿತ್ರದಲ್ಲಿ ಬಾಲ ಕಲಾವಿದರಾಗಿ ಅಭಿನಯಿಸಿದ್ದು, ಹಾಡುಗಳನ್ನು ಬಿಡುಗಡೆ ಮಾಡಿದ ಖ್ಯಾತ ಸಂಗೀತ ನಿರ್ದೇಶಕ ರಘು ಧೀಕ್ಷಿತ್ ಚಿತ್ರಕ್ಕೆ ಶುಭ ಕೋರಿದರು.

Write A Comment